ಸುಳ್ಯ: ಕೆವಿಜಿ ಆಯುರ್ವೇದ ಕಾಲೇಜಿನ ಸ್ವಸ್ತವೃತ್ತ ಮತ್ತು ಯೋಗ ವಿಭಾಗ, ಎನ್ ಎಸ್ ಎಸ್ ಘಟಕ ಹಾಗೂ ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ಕಾಲೇಜ್ ಮೂಡುಬಿದಿರೆಯ ಸಹಯೋಗದೊಂದಿಗೆ ಯೋಗ ದಿನಾಚರಣೆ ಕಾಲೇಜಿನ ಆವರಣದಲ್ಲಿ ನಡೆಯಿತು.
ಕಾಲೇಜಿನ
ಪ್ರಾಂಶುಪಾಲರಾದ ಡಾ. ಲೀಲಾಧರ ಡಿ ವಿ ಉದ್ಘಾಟಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ

ಶ್ರಾವಣಿ ಮತ್ತು ಬಳಗ ಪ್ರಾರ್ಥಿಸಿ, ವಿದ್ಯಶ್ರೀ ಸ್ವಾಗತಿಸಿ, ಮೋನಿಷಾ ವಂದಿಸಿ, ತನುಷಾ ಮತ್ತು ಕು ಪ್ರಿಯಾಂಕ ನಿರೂಪಿಸಿದರು. ಕಾಲೇಜಿನ ಅಕಾಡೆಮಿಕ್ ಕೊ ಆರ್ಡಿನೇಟರ್ ಡಾ.ಕವಿತಾ ಬಿ ಎಂ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ವಿನಯ್ ಶಂಕರ್ ಭಾರಧ್ವಾಜ್ ಬಿ, ಯೋಗ ದಿನಾಚರಣೆಯ ಕೊ ಆರ್ಡಿನೇಟರ್ ಡಾ. ಅವಿನಾಶ್ ಕೆ ವಿ, ಸ್ವಸ್ತವೃತ್ತ ಮತ್ತು ಯೋಗ ವಿಭಾಗದ ಪ್ರಾಧ್ಯಾಪಕ ಡಾ.ಜಯವಾಣಿ ಎಂ ಜಿ ಹಾಗೂ ಡಾ. ಶಬೀನಾ ಟಿ ಟಿ, ಎನ್ ಎಸ್ ಎಸ್ ಘಟಕದ ಕೋ ಆರ್ಡಿನೇಟರ್ ಡಾ. ಪ್ರಮೋದ್ ಪಿ ಎ, ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ಮೂಡುಬಿದಿರೆಯ ಯೋಗ ಪ್ರಾಧ್ಯಾಪಕರಾದ ಡಾ ಶ್ರೀನಿವಾಸ್ ಕೆ ಶೆಣೈ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ತಿತರಿದ್ದರು.







