ಸುಳ್ಯ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಂದೂಕು ದಾರರು ತಮ್ಮಲ್ಲಿರುವ ಬಂದೂಕನ್ನು ಡೆಪಾಸಿಟ್ ಮಾಡಲು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದ ಹಿನ್ನಲೆಯಲ್ಲಿ ತಾಲೂಕಿನಿಂದ 307 ಮಂದಿ ರೈತರು
ವಿನಾಯಿತಿಕೋರಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅರ್ಜಿಗಳ ವಿಚಾರಣೆ ನಡೆದು 300 ಅರ್ಜಿಗಳು ತಿರಸ್ಕೃತಗೊಂಡಿದ್ದು, 7 ಮಂದಿಗೆ ವಿನಾಯಿತಿ ಸಿಕ್ಕಿದೆ. ಆದ್ದರಿಂದ ಬಂದೂಕುದಾರರು ಮಾ. 31ರೊಳಗೆ ತಮಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ತಮ್ಮ ಬಂದೂಕನ್ನು ಡೆಪಾಸಿಟ್ ಇಡುವಂತೆ ತಿಳಿಸಲಾಗಿದೆ.