ಸುಳ್ಯ:ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಎರಡು ದಿನಗಳ ಕಾಲ ನಡೆಯುವ ವಾರ್ಷಿಕ ಕ್ರೀಡಾಕೂಟವು ನ.19ರಂದು ಕೆವಿಜಿ ಮೈದಾನದಲ್ಲಿ ಆರಂಭಗೊಂಡಿತು. ಕ್ರೀಡಾಕೂಟವನ್ನು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಬಾಲಚಂದ್ರ ಗೌಡ.ಬಿ ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿ ಜೀವನದಲ್ಲಿ
ಉಳಿದ ಪಠ್ಯ ವಿಷಯಗಳಂತೆ ದೈಹಿಕ ಶಿಕ್ಷಣವೂ ಅತ್ಯಂತ ಮಹತ್ವವಾದುದು. ಉಳಿದ ಪಠ್ಯಗಳಂತೆ ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಬೇಕು ಎಂದರು. ಕೆವಿಜಿ ಐಪಿಎಸ್ ವಿದ್ಯಾರ್ಥಿಗಳ ಶಿಸ್ತು ಮತ್ತು ಕ್ರೀಡಾ ಸ್ಪೂರ್ತಿ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.ಸಮಾರಂಭದ

ಅಧ್ಯಕ್ಷತೆ ವಹಿಸಿದ್ದ ಕೆವಿಪಿ ಐಪಿಎಸ್ನ ಪ್ರಾಂಶುಪಾಲರಾದ ಅನೀಶ್ನಾದ್ ಇ.ಎಂ. ಮಾತನಾಡಿ ‘ಶಾಲಾ ಕ್ರೀಡಾ ಕೂಟವು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಎಂದರು.ಶಿಸ್ತು, ಸಂಯಮ, ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದು ಅವರು ಕರೆ ನೀಡಿದರು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ ಇದರ

ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಅಕಾಡೆಮಿಯ ಕಚೇರಿ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಮುಖ್ಯ ಅತಿಥಿಯಾಗಿದ್ದರು.ಕೆವಿಜಿ ಐಪಿಎಸ್ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆಕರ್ಷಕ ಪಥ ಸಂಚಲನ ನಡೆಯಿತು. ಧ್ವಜಾರೋಹಣ ನೆರವೇರಿಸಿದ ಮುಖ್ಯ ಅತಿಥಿ ಬಾಲಚಂದ್ರ ಗೌಡ ಬಿ ಗೌರವ ವಂದನೆ ಸ್ವೀಕರಿಸಿದರು.ಎರಡು ದಿನಗಳ ಕಾಲ ನಡೆಯುವ ವಾರ್ಷಿಕ ಕ್ರೀಡಾಕೂಟ ‘ಪ್ಲೇ ಎಕ್ಸೈಟ್’ನಲ್ಲಿ ಕೆವಿಜಿ ಐಪಿಎಸ್ನ ವಿದ್ಯಾರ್ಥಿಗಳಿಗಾಗಿ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.















