ಲಂಡನ್ : ಲಾರ್ಡ್ಸ್ನಲ್ಲಿ ಆರಂಭವಾದ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 212 ರನ್ಗಳಿಗೆ ಆಲ್ ಔಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸೀಸ್ ತಿರುಗೇಟು ನೀಡಿದೆ. ಮೊದಲ ದಿನವೇ 14 ವಿಕೆಟ್ ಪತನಗೊಳ್ಳುವ ಮೂಲಕ ಟೆಸ್ಟ್ ರೋಚಕತೆ ಕಾಯ್ದುಕೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ
4 ವಿಕೆಟ್ 43 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಐದು ವಿಕೆಟ್ ಗೊಂಚಲು ಪಡೆದ ಕಾಗಿಸೋ ರಬಡಾ ಆಸ್ಟ್ರೇಲಿಯಾವನ್ನು ಕಡಿಮೆ ಸ್ಕೋರ್ಗೆ ಕಟ್ಟಿ ಹಾಕಲು ನೆರವಾದರು.ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ತೆಂಬಾ ಬವುಮಾ ನಿರ್ಧಾರ ಸಮರ್ಥಿಸುವಂತೆ ರಬಾಡ ಅವರು ಇನಿಂಗ್ಸ್ನ ಏಳನೇ ಓವರಿನಲ್ಲೇ ಉಸ್ಮಾನ್ ಖ್ವಾಜಾ ಮತ್ತು ಕ್ಯಾಮರಾನ್ ಗ್ರೀನ್ ಅವರ ವಿಕೆಟ್ಗಳನ್ನು ಪಡೆದು ಅವರು ಆರಂಭದಲ್ಲೇ ಆಸ್ಟ್ರೇಲಿಯಾಕ್ಕೆ ಪೆಟ್ಟು ನೀಡಿದ್ದರು.ಅವರಿಗೆ ಬೆಂಬಲ ನೀಡಿದ ಮಾರ್ಕೊ ಯಾನ್ಸೆನ್ ಅವರು ಮಾರ್ನಸ್ ಲಾಬುಶೇನ್ ಮತ್ತು ಅಪಾಯಕಾರಿ ಆಟಗಾರ ಟ್ರಾವಿಸ್ ಹೆಡ್ ಅವರ ವಿಕೆಟ್ಗಳನ್ನು ಪಡೆದರು. ಆಗ ಮೊತ್ತ 4 ವಿಕೆಟ್ಗೆ 67 ರನ್ ಆಗಿತ್ತು. ಬಳಿಕ ಅನುಭವಿ ಸ್ಟೀವ್ ಸ್ಮಿತ್ (66, 10×4) ಅರ್ಧ ಶತಕ ಬಾರಿಸಿ ಆಸರೆಯಾದರು. ತಂಡದ ಪರ ಅತ್ಯಧಿಕ ಮೊತ್ತ ಗಳಿಸಿದ ಬ್ಯೂ ವೆಬ್ಸ್ಟರ್ (72, 92ಎ) ಜೊತೆ ಐದನೇ ವಿಕೆಟ್ಗೆ 69 ರನ್ ಸೇರಿಸಿದ್ದರಿಂದ ಕಾಂಗರೂ ಪಡೆ ಚೇತರಿಸಿಕೊಂಡಿತು.
ಟೀ ವಿರಾಮದ ನಂತರ, ರಬಾಡ ಒಂದೇ ಓವರಿನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಆಕ್ರಮಣಕಾರಿಯಾಗಿದ್ದ ವೆಬ್ಸ್ಟರ್ ವಿಕೆಟ್ಗಳನ್ನು ಪಡೆದು ಮಿಂಚಿದರು. ನಂತರ ಮಿಚೆಲ್ ಸ್ಟಾರ್ಕ್ ಅವರ ವಿಕೆಟ್ ಕೂಡ ಪಡೆದು ಇನಿಂಗ್ಸ್ಗೆ ತೆರೆಯೆಳೆದರು. ದಕ್ಷಿಣ ಆಫ್ರಿಕಾದ ನಾಲ್ಕು ವಿಕೆಟ್ 43 ರನ್ ಅಂತರದಲ್ಲಿ ಪತನಗೊಂಡಿದ್ದು ಆಸೀಸ್ ಪರ ಮಿಚೆಲ್ ಸ್ಟಾರ್ಕ್ 2,
ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮಿನ್ಸ್ ತಲಾ ಒಂದು ವಿಕೆಟ್ ಉರುಳಿಸಿದರು.