ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ ಸಮೀಪ ಇಂಜಾಡಿಯಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಒಂಟಿ ಸಲಗವೊಂದು ಬೀಡು ಬಿಟ್ಟಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ.ಕಳೆದ ಕೆಲವು ದಿನಗಳಿಂದ ಒಂಟಿ ಸಲಗ ಇಲ್ಲಿ ಬೀಡು ಬಿಟ್ಟಿದೆ. ಇಂದು ಕೂಡ ಸಲಗ ರಸ್ತೆ ಬದಿಯ ಕಾಡಿನಲ್ಲಿ ಆನೆ ಇದೆ ಎಂದು

ಸ್ಥಳೀಯರು ತಿಳಿಸಿದ್ದಾರೆ. ದೇವಸ್ಥಾನದ ಸಮೀಪ ಹಾಗೂ ಜನವಸತಿ ಪ್ರದೇಶದ ಸಮೀಪದಲ್ಲಿ ಹಾಗೂ ನೂರಾರು ವಾಹನಗಳು ಓಡಾಡುವ ರಾಜ್ಯ ಹೆದ್ದಾರಿ ಬದಿಯಲ್ಲಿ ಆನೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಆನೆ ಕಂಡು ಬಂದಿದ್ದು ಆನೆಯನ್ನು ದೂರ ಅಟ್ಟಲು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಪ್ರಯತ್ನ ನಡೆಸಿದರೂ ಫಲಕಾರಿಯಾಗಿಲ್ಲ.
ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿ ಆನೆಯನ್ನು ದೂರ ಕಾಡಿಗೆ ಸರಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.