ಬೆಂಗಳೂರು:ರಾಜ್ಯದ ಸುದ್ದಿ ಸಂವಹನ ಸಂಸ್ಥೆ ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವರ್ಷಂಪ್ರತಿ ಕೊಡಮಾಡುವ ವಿಎಸ್ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಸುಳ್ಯದವರಾದ ಹರಿಪ್ರಸಾದ್ ಅಡ್ಪಂಗಾಯ ಹಾಗೂ ಮುಮ್ತಾಜ್ ನೇಲ್ಯಡ್ಕ ಹಾಗೂ ಮೂಲತಃ ಸುಳ್ಯದವರಾದ ರಾಧಾಕೃಷ್ಣ ಕಲ್ಚಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ
ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಅಧ್ಯಕ್ಷ ಡಾ.ವಿ. ಶ್ರೀಧರ ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ ಅವರಿಗೆ ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ, ಸುಧರ್ಮಾ ಸಂಸ್ಕೃತ ಪತ್ರಿಕೆಯ ಸಂಪಾದಕಿ ಮೈಸೂರಿನ ಕೆ.ಎಸ್.ಜಯಲಕ್ಷ್ಮಿ ಅವರಿಗೆ ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಹಾಯಕ ಸ್ಥಾನೀಯ ಸಂಪಾದಕ ರಾಮು ಪಾಟೀಲ್ ಅವರಿಗೆ ಎಂ.ವಿ.ಕಾಮತ್ ಪತ್ರಿಕೋದ್ಯಮ ಪ್ರಶಸ್ತಿ, ನ್ಯೂಸ್ 18 ಕನ್ನಡದ ಹರಿಪ್ರಸಾದ್ ಎ ಅವರಿಗೆ ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿ, ಖ್ಯಾತ ಅಂಕಣಕಾರ ರಾಧಾಕೃಷ್ಣ ಕಲ್ಚಾರ್ ಅವರಿಗೆ ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿ, ಟಿವಿ ವಿಕ್ರಮದ ಮುಮ್ತಾಜ್ ಅಬ್ದುಲ್ ನೆಲ್ಯಡ್ಕ ಅವರಿಗೆ ವಿಎಸ್ ಕೆ ಡಿಜಿಟಲ್ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು, ಅಂಕಣಕಾರರು, ಸಾಮಾಜಿಕ ಜಾಲತಾಣಿಗರು, ಸಾಮಾಜಿಕ ಕಾರ್ಯಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.