ಸುಳ್ಯ:ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಜಯನಗರ ಸ ಉ ಹಿ ಪ್ರಾ ಶಾಲೆಯ ಸುಮಾರು 70 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ
ಸುಳ್ಯ ನ. ಪಂ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ ಮತ್ತು ಅವರ ಪುತ್ರ ಹಾಗೂ ಟ್ರಸ್ಟ್ ನ ಸದಸ್ಯರಾದ ಸಂತೋಷ್ ಕೊಡೆಂಕಿರಿಯವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು.ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವೀಣಾ ಕೆ, ಹಾಗೂ ಅಧ್ಯಾಪಕ ವೃಂದದವರು ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ,ಉಪಾಧ್ಯಕ್ಷರು ನಳಿನಿ ಹಾಗೂ ಸದಸ್ಯರು,ವಿದ್ಯಾರ್ಥಿಗಳ ಪೋಷಕರು ಪೋಷಕರು ಉಪಸ್ಥಿತರಿದ್ದರು.