ಮಂಗಳೂರು:ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದೆ. ದ.ಕ. ಉಡುಪಿ ಜಿಲ್ಲೆಗಳ ಸುಳ್ಯ ಪುತ್ತೂರು ಬೆಳ್ತಂಗಡಿ ಕಾರ್ಕಳ ಹೆಬ್ರಿ ತಾಲ್ಲೂಕುಗಳಲ್ಲಿ ಸಂಜೆ – ನಾಳೆ ಮುಂಜಾನೆ ಮೋಡದ ವಾತಾವರಣ ಇರಬಹುದು. ಸೆ 17 ರಿಂದ ದ.ಕ. ದ ಘಟ್ಟಪ್ರದೇಶಗಳಲ್ಲಿ ಲ ಮಳೆ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ ಮಲೆನಾಡು ಹಾಗು
ಉತ್ತರ ಒಳನಾಡಿನಲ್ಲಿ ಬಿಸಿಲಿನ ವಾತಾವರಣ, ಬಹುತೇಕ ಒಣಹವೆ ಇದೆ.
ಮಲೆನಾಡಿನ ಕೊಡಗು ಜಿಲ್ಲೆಯ ಹಲವೆಡೆ ಸಂಜೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು/ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಸೆ 20ರಿಂದ 3-4 ದಿನ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನಲ್ಲಿ ಮೈಸೂರು ಚಾಮರಾಜನಗರ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಸಂಜೆ ತುಂತುರು – ಸಣ್ಣ ಮಳೆಯ ಮುನ್ಸೂಚನೆ ಇದೆ. ಸೆ.19ರಿಂದ
ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಬಿಜಾಪುರ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಬಹುದು. ಉತ್ತರ ಒಳನಾಡಿನಲ್ಲಿ ಸೆ 18 ರಿಂದ ಗುಡುಗು ಮಳೆ ಮುನ್ಸೂಚನೆ ಇದೆ. ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಶ್ರೀಲಂಕಾ ಅಗ್ನೇಯದ ದುರ್ಬಲ ಸೈಕ್ಲೋನಿಕ್ ಸರ್ಕ್ಯುಲೇಷನ್ ಕಾರಣದಿಂದ ತಮಿಳುನಾಡು ಕೇರಳದ ಅಲ್ಲಲ್ಲಿ ಗುಡುಗು ಮಳೆಯಾಗುತ್ತಿದ್ದು ಈ ಟ್ರಫ್ ಕರ್ನಾಟಕದ ದಕ್ಷಿಣ ಒಳನಾಡಿನ ತನಕ ಮುಂದುವರೆದಿದೆ.ಕರ್ನಾಟಕದ ದಕ್ಷಿಣ/ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಲೆನಾಡಿನಲ್ಲಿ ಸೆ 19 ರಿಂದ ಮಳೆಯ ಮುನ್ಸೂಚನೆ ಇದೆ. ಆದರೇ ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಡಿಮೆ ಇರಲಿದ್ದು ಘಟ್ಟಪ್ರದೇಶಗಳಲ್ಲಿ 17ರಿಂದ ಕರಾವಳಿ ತೀರಗಳಲ್ಲಿ ಸೆ 20-23 ಸಾಮಾನ್ಯ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.











