ಸುಳ್ಯ:ಸುಳ್ಯ ಎಸ್ಐ ಸಂತೋಷ್ ಕುಮಾರ್.ಬಿ.ಪಿ.ಅವರಿಗೆ ವರ್ಗಾವಣೆಯಾಗಿದೆ. ನೂತನ ಸುಳ್ಯ ಎಸ್ಐ ಆಗಿ ಉದಯರವಿ ವೈ.ಎಂ.ಅವರು ಆಗಮಿಸಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ಬಿ.ಪಿ.ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ
ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸೈಬರ್ ಕ್ರೈಂ ಠಾಣೆಯ ಎಸ್ಐ ಉದಯರವಿ ಅವರಿಗೆ ಸುಳ್ಯ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆಯ ಎಸ್ಐ ಆಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಂತೋಷ್ ಕುಮಾರ್ ಈ ಹಿಂದೆ ಬೆಳ್ಳಾರೆ ಎಸ್ಐ ಆಗಿ, ಸುಳ್ಯದಲ್ಲಿ ಪ್ರೊಬೇಷನರಿ ಎಸ್ಐ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.









