ಅರಂಬೂರು:ನಮ್ಮ ಸಂಸ್ಕೃತಿ ಸಂಪ್ರದಾಯ ಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಮನೆಯಲ್ಲಿ ಮಾಡುವ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಮಕ್ಕಳನ್ನು ಸಕ್ರಿಯವಾಗಿ ಭಾಗವಹಿಸುವ ಮೂಲಕ ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸಬಹುದು ಎಂದು
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇದರ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು. ಆರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಭಾಷಣ ಮಾಡಿದರು.
ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಪ್ರಮುಖರಾದ ಕೃಷ್ಣ ಕಾಮತ್, ಶ್ರೀಪತಿ ಭಟ್,
ಶೌರ್ಯ ವಿಪತ್ತು ಸುಳ್ಯ ತಾಲೂಕು ಮಾಸ್ಟರ್ ರದೀಶನ್ ಅರಂಬೂರು, ಒಕ್ಕೂಟ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್, ನೂತನ ಅಧ್ಯಕ್ಷ ಅಶೋಕ ಪೀಚೆ,ಪರಿವಾಕನ ಒಕ್ಕೂಟ ಅಧ್ಯಕ್ಷ ಬಾಲಚಂದ್ರ,ನೂತನ ಅಧ್ಯಕ್ಷ ರತ್ನಕರ ರೈ ಅರಂಬೂರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ,ಪರಿವಾರಕಾನ ಒಕ್ಕೂಟ, ಅರಂಬೂರು ಒಕ್ಕೂಟ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು ಇದರ ಸಂಯುಕ್ತ ಆಶ್ರಯ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಸುರೇಶ್ ನಿರೂಪಿಸಿ ಮೇಲ್ವಿಚಾರಕರ ದಿನೇಶ್ ಡಿ ಸ್ವಾಗತಿಸಿ ಸೇವಾಪ್ರತಿನಿಧಿ ವಿಜಯಶ್ರೀ ವಂದಿಸಿದರು.ಪೂಜಾ ಕಾರ್ಯಕ್ರಮ ವೈಧಿಕ ವಿಧಿವಿಧಾನ ಅಭಿರಾಮ್ ಭಟ್ ನೆರವೇರಿಸಿದರು.









