ಸೋಣಂಗೇರಿ: ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮಾಜಿ ಸಚಿವರಾದ ಎಸ್. ಅಂಗಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ರವೀಂದ್ರನಾಥ ನಡುಮನೆ, ಶ್ರೀಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಖಜಾಂಚಿ ಲೀಲಾವತಿ ನಡುಮನೆ, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಸದಸ್ಯರಾದ ಸುಪ್ರೀತ್ ಮೋಂಟಡ್ಕ, ಶುಭಾ ಕಾಡುತೋಟ, ಕೇಶವ ಕುಕ್ಕಾಜೆಕ್ಕಾನ, ಮೋಹಿನಿ ನಡುಮನೆ, ಪ್ರಿಯಾಂಕಾ ನಡುಮನೆ, ಹೇಮಂತ್ ಕುಂಟಿಕ್ಕಾನ, ಲೋಕೇಶ ಸುತ್ತುಕೋಟೆ ಹಾಗೂ ಹರೀಶ್, ಮುರಳಿ, ವಿಜೇತ್ ಅಡ್ಯಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.








