ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಯು ಪ್ರಗತಿಯಲ್ಲಿದ್ದು,18,03,766 ಮತದಾರರ ಪೈಕಿ ಆಗಸ್ಟ್ 4 ರವರೆಗೆ 18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 16,43,831 ಫಾರ್ಮ್ಗಳನ್ನು
ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ ಬೆಳ್ತಂಗಡಿ-217959, ಮೂಡಬಿದ್ರೆ-193333, ಮಂಗಳೂರು ನಗರ ಉತ್ತರ-222635, ಮಂಗಳೂರು ನಗರ ದಕ್ಷಿಣ-205074, ಮಂಗಳೂರು-194987, ಬಂಟ್ವಾಳ-211706, ಪುತ್ತೂರು-201494, ಸುಳ್ಯ- 196643.












