ನ್ಯೂಯಾರ್ಕ್ ಫಿಫಾ ವಿಶ್ವಕಪ್–2026 ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಸೆಮಿಫೈನಲ್ ಕಾದಾಟಕ್ಕೆ ಕಣ ಸಿದ್ಧಗೊಂಡಿದೆ. ಕ್ವಾರ್ಟರ್ ಫೈನಲ್ನಲ್ಲಿ ಭರ್ಜರಿ ಜಯ ಸಾಧಿಸಿರುವ ಹಾಲಿ ಚಾಂಪಿಯನ್ ಅರ್ಜೆಂಟೀನಾ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ಗೆ ಲಗ್ಗೆ ಇಟ್ಟಿವೆ. ಮೊದಲ ಸೆಮಿಫೈನಲ್ ಪಂದ್ಯ
ಫ್ರಾನ್ಸ್ ಮತ್ತು ಸ್ಪೇನ್ ಮಧ್ಯೆ ಜುಲೈ 15ರ ಬುಧವಾರ, ಮಧ್ಯಾರಾತ್ರಿ 12:30ಕ್ಕೆ ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ಮಧ್ಯೆ ನಡೆಯಲಿದೆ. ಈ ಪಂದ್ಯ ಜುಲೈ 16ರ ಗುರುವಾರ ಮಧ್ಯಾರಾತ್ರಿ 12:30ಕ್ಕೆ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ವಾರ್ಟರ್ ಫೈನಲ್ನಲ್ಲಿ ಮೊರಾಕೊ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿರುವ ಫ್ರಾನ್ಸ್, ಈ ಟೂರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡವಾಗಿದೆ.ಟೂರ್ನಿಯಲ್ಲಿ 8 ಗೋಲು ದಾಖಲಿಸಿರುವ ತಂಡದ ನಾಯಕ ಕೈಲಿಯನ್ ಎಂಬಾಪೆ ಈ ತಂಡದ ಶಕ್ತಿಯಾಗಿದ್ದಾರೆ. ಅವರು ಗೋಲ್ಡನ್ ಬೂಟ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.ಬೆಲ್ಜಿಯಂ ವಿರುದ್ಧ 2-1 ಅಂತರದಲ್ಲಿ ರೋಚಕ ಜಯ ಸಾಧಿಸಿ ಸೆಮಿಫೈನಲ್ ತಲುಪಿರುವ ಸ್ಪೇನ್ ತಂಡವು, ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿದೆ.ನಾರ್ವೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ 2-1 ಗೋಲುಗಳ ರೋಚಕ ಗೆಲುವು ಸಾಧಿಸಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.
ತಲಾ 6 ಗೋಲುಗಳನ್ನು ದಾಖಲಿಸಿರುವ ನಾಯಕ ಹ್ಯಾರಿ ಕೇನ್, ಮತ್ತು ಜೂಡ್ ಬೆಲ್ಲಿಂಗ್ಹ್ಯಾಮ್ ತಂಡದ ಶಕ್ತಿಯಾಗಿದ್ದಾರೆ.
ಹಾಲಿ ಚಾಂಪಿಯನ್ ಅರ್ಜೆಂಟಿನಾ ತಂಡವು ಸ್ವಿಟ್ಜರ್ಲ್ಯಾಂಡ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆದ್ದು ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿದೆ. ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು 8 ಗೋಲುಗಳನ್ನು ಬಾರಿಸಿ ಎಂಬಾಪೆ ಅವರ ಜೊತೆ ಗೋಲ್ಡನ್ ಬೂಟ್ ಓಟದಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದು, ಇವರೇ ತಂಡದ ಶಕ್ತಿಯಾಗಿದ್ದಾರೆ.
ಯುನೈಟ್8 ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಪಂದ್ಯಗಳ ನೇರಪ್ರಸಾರ ವೀಕ್ಷಿಸಬಹುದು. ಝೀ5ನಲ್ಲಿಯೂ ವೀಕ್ಷಣೆ ಮಾಡಬಹುದು.






