ಪಂಜ:ಶ್ರೀಮುಖ ಪ್ರತಿಷ್ಠಾನ ಪಂಜ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ಪಂಜ,ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ವನಿತಾ ಸಮಾಜ ಪಂಜ ಜಂಟಿಯಾಗಿ ಹಮ್ಮಿಕೊಂಡ
ಸಂಸ್ಕಾರ ಅಧ್ಯಯನ ಪ್ರಾರಂಭೋತ್ಸವ ಇಂದು(ಅ.25ರಂದು) ಅಪರಾಹ್ನ 3ಕ್ಕೆ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಾಲಯದ
ಪಾರ್ವತಿ ಸಭಾ ಭವನದಲ್ಲಿ ನಡೆಯಲಿದೆ.ನಿತ್ಯ ಪ್ರಾರ್ಥನಾ ಶ್ಲೋಕಗಳು, ಶಾಂತಿ ಮಂತ್ರಗಳು, ವಿಷ್ಣು ಸಹಸ್ರನಾಮ, ಶಿವಸಹಸ್ರನಾಮಾವಳಿ ಹಾಗೂ ತಿಳಿದಿರಬೇಕಾದ ಸಂಸ್ಕಾರಗಳನ್ನು ಕಲಿಸಲಾಗುತ್ತದೆ.
ಪ್ರತಿ ವಾರಕ್ಕೊಮ್ಮೆ ಒಂದುವರೆ ಗಂಟೆಗಳ ಕಾಲ ದೇವಾಲಯದ ವಠಾರದಲ್ಲಿ ಉಚಿತವಾಗಿ ಪಾಠ ಹೇಳಿಕೊಡಲಾಗುವುದು. ಸ್ಥಳೀಯ ಮಕ್ಕಳು ಯುವಕ ಯುವತಿ ಮಹಿಳೆ ಮಹನೀಯರೆಲ್ಲರೂ ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.














