ಸಂಪಾಜೆ:ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷರಾಗಿ ಯಮುನ ಬಿ.ಎಸ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಮುನ ಬಿ.ಎಸ್. ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ
ಅವಿರೋಧವಾಗಿ ನಡೆಯಿತು. ನಿರ್ದೇಶಕರಾಗಿರುವ ಮಹಮ್ಮದ್ ಕುಂಞಿ ಗೂನಡ್ಕ ಅವರು ಅಧ್ಯಕ್ಷತೆಗೆ ಸೋಮಶೇಖರ ಕೊಯಿಂಗಾಜೆ ಅವರ ಹೆಸರು ಸೂಚಿಸಿ, ಕೆ.ಪಿ. ಜಾನಿ ಅನುಮೋದಿಸಿದರು.ಉಪಾಧ್ಯಕ್ಷತೆಗೆ ಯಮುನ ಬಿ.ಎಸ್. ಅವರ ಹೆಸರನ್ನು ನಿರ್ದೆಶಕ ಜಗದೀಶ್ ರೈ ಸೂಚಿಸಿ, ನಿರ್ದೇಶಕ ಅಬುಸಾಲಿ ಅನುಮೋದಿಸಿದರು.
ಸಹಕಾರ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ರಥನ್, ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.