ಸುಳ್ಯ: ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿ ಡಾ.ಬಿ.ರೇವತಿ ನಂದನ್ ಅವರ ನೂತನ ಕೃತಿ ‘ಕಾಡಂಚಿನ ಹಣತೆಗಳು’ ಬಿಡುಗಡೆ ಕಾರ್ಯಕ್ರಮ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ
ನಿವೃತ್ತ ಉಪನ್ಯಾಸಕಿ ಹಾಗು ಸಾಹಿತಿ ಜಯಮ್ಮ ಚೆಟ್ಟಿಮಾಡ ಕೃತಿ ಬಿಡುಗಡೆ ಮಾಡಿದರು. ಶಿಕ್ಷಕರು ಹಾಗು ಅಂಕಣಕಾರರಾದ ಡಾ.ಸುಂದರ ಕೇನಾಜೆ ಕೃತಿ ಪರಿಚಯ ಮಾಡಿದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷ ಕುಮಾರಸ್ವಾಮಿ ತೆಕ್ಕುಂಜ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಡಾ.ಬಿ.ರೇವತಿ ನಂದನ್, ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡ,ಡಾ.ರಂಗಯ್ಯ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಣ ಸಂಯೋಜನಾಧಿಕಾರಿ ಕೇಶವ ಸಿ.ಎ ಕಾರ್ಯಕ್ರಮ ನಿರೂಪಿಸಿದರು.ಗಾಯಕ ಕೆ. ಆರ್.ಗೋಪಾಲಕೃಷ್ಣ ಅವರಿಂದ ಆಶಯಗೀತೆ, ಮಳೆ ಹಾಡು, ಎಸ್.ಜಾನಕಿ ನೆನಪು ಮತ್ತು ಸ್ವಾತಂತ್ರ್ಯ ಗೀತೆ ಹಾಡುಗಾರಿಕೆ ನಡೆಯಿತು. ಕೃತಿಯ ಕುರಿತು ಸಂವಾದ ಏರ್ಪಡಿಸಲಾಯಿತು.








































