ಸಂಪಾಜೆ:ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಡಿ.23ರಂದು ನಡೆಯಲಿದ್ದು,12 ಸ್ಥಾನಗಳಿಗೆ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾಗಿ
ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಜಾನಿ ಕೆ.ಪಿ, ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಯಮುನಾ ಬಿ.ಎಸ್ ಹಾಗೂ ಪ್ರಮೀಳಾ ಪೆಲ್ತಡ್ಕ ಸ್ಪರ್ಧಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಉಷಾ ರಾಮ ನಾಯ್ಕ ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಸುಶೀಲ ಬಾಲಕೃಷ್ಣ ಸ್ಪರ್ಧಿಸುತ್ತಿದ್ದಾರೆ.