ಸಂಪಾಜೆ:ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಡಿ.23ರಂದು ನಡೆಯಲಿದ್ದು 12 ನಿರ್ದೇಶಕ ಸ್ಥಾನಕ್ಕೆ 27 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ
ಸುಮತಿ ಶಕ್ತಿವೇಲು ಹಾಗೂ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಈ ಬಾರಿ ಸಹಕಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಜಿ.ಕೆ.ಹಮೀದ್ ಗೂನಡ್ಕ ಸ್ಪರ್ಧಿಸುತ್ತಿದ್ದಾರೆ.ಮಹಿಳಾ ಮೀಸಲು ಸ್ಥಾನಕ್ಕೆ
ಸುಮತಿ ಎಸ್. ಸ್ಪರ್ಧಿಸುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಇವರು ಕಣಕ್ಕೆ ಇಳಿದಿದ್ದಾರೆ.
![](https://thesulliamirror.com/wp-content/uploads/2024/12/IMG-20241218-WA0004.jpg)