ಮುಲ್ಲನಪುರ(ಚಂಡೀಗಡ): ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿತು ಗುರುವಾರ ಚಂಡೀಗಡದ ಮುಲ್ಲನಪುರದಲ್ಲಿ ನಡೆದ ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ 8 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ಎದುರು ಜಯಿಸಿತು. ಫಿಲ್ ಸಾಲ್ಟ್ 27 ಎಸೆತಗಳಲ್ಲಿ 56 ರನ್ ಗಳಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.ಟಾಸ್ ಸೋತು ಬ್ಯಾಟಿಂಗ್ ಮಾಡಿದ
ಪಂಜಾಬ್ ಕಿಂಗ್ಸ್, ಆರ್ಸಿಬಿಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. 14.1 ಓವರ್ಗಳಲ್ಲಿ ಕೇವಲ 101 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ, ಆರ್ಸಿಬಿ 8 ವಿಕೆಟ್ಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿತು. ಈ ಮೂಲಕ ನಾಲ್ಕನೇ ಬಾರಿಗೆ ಫೈನಲ್ಗೆ ತಲುಪಿದೆ.ಈ ಸೋಲಿನ ಹೊರತಾಗಿಯೂ ಪಂಜಾಬ್ಗೆ ಮಗದೊಂದು ಅವಕಾಶ ಇರಲಿದ್ದು, ಭಾನುವಾರ ಅಹಮದಾಬಾದ್ನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ವಿಜೇತ ತಂಡವನದನು ಎದುರಿಸಲಿದೆ.
ನಾಳೆ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾ-ಮುಖಿಯಾಗಲಿವೆ.
ಫೈನಲ್ ಪಂದ್ಯವು ಜೂನ್ 3 ರಂದು ಅಹಮದಾಬಾದ್ ನಲ್ಲಿ ನಡೆಲಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ
ಆರ್ಸಿಬಿಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ತಂಡ 14.1 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಗಿದೆ.ಪ್ರಭ್ ಸಿಮ್ರನ್ ಸಿಂಗ್(18), ಮಾರ್ಕಸ್ ಸ್ಟೋಯಿನಸ್(26), ಅಮಾನತುಲ್ಲಾ(18) ಬಿಟ್ಟರೆ ಬೇರಾವ ಬ್ಯಾಟರ್ ಎರಡಂಕಿ ದಾಟಲಿಲ್ಲ.ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಆರ್ಸಿಬಿಯ ಎಲ್ಲ ಟಾಪ್ ಬೌಲರ್ಗಳು ಪಂಜಾಬ್ ತಂಡಕ್ಕೆ ಸಿಂಹಸ್ವಪ್ನವಾದರು. ಜೋಶ್ ಹ್ಯಾಜಲ್ವುಡ್(21/3), ಸುಯಶ್ ಶರ್ಮಾ(17/3), ಯಶ್ ದಯಾಳ್(26/2) ಮತ್ತು ಭುವನೇಶ್ವರ್ ಕುಮಾರ್(17/1) ಶ್ರೇಷ್ಠ ಬೌಲಿಂಗ್ ಮೂಲಕ ಪಂಜಾಬ್ ತಂಡವನ್ನು ಕಟ್ಟಿಹಾಕಿದರು.