ಸುಳ್ಯ: ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದಲ್ಲಿ 6ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಎ.21 ಮತ್ತು 22 ರಂದು ವಿಜ್ರಂಭಣೆಯಿಂದ ನಡೆಯಿತು. ಈ ಪ್ರಯುಕ್ತ, ಭಜನೆ, ವಿವಿಧ
![](https://thesulliamirror.com/wp-content/uploads/2024/04/IMG_20240422_201613.jpg)
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. 21ರಂದು ಆದಿತ್ಯವಾರ ಸಂಜೆ ಭಜನೆ ನಡೆಯಿತು.ಎ.22 ರಂದು ಸೋಮವಾರ ಪೂ. 11-30ರಿಂದ ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ ಬಳಗ ಇವರಿಂದ ಭಕ್ತಿಗಾನ ಸಂಗೀತ ನಡೆಯಿತು.ಸಂಜೆ
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಬಳಿಕ ಪುತ್ತೂರು ತೆಂಕಿಲದ ಧೀಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ ಶ್ರೀಮತಿ ಪದ್ಮ ಕೆ. ಆರ್. ಆಚಾರ್ಯ ಇವರ ಸಾರಥ್ಯದಲ್ಲಿ
ಯಕ್ಷಗಾನ ತಾಳಮದ್ದಳೆ ಸಮರ ಸೌಗಂಧಿಕ ನಡೆಯಿತು.