ಸುಳ್ಯ:ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸ್ವರ್ಣಂ ಜ್ಯುವೆಲ್ಸ್ ಹಾಗೂ ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಯೋಗದಲ್ಲಿ ಪುಟಾಣಿ ಮಕ್ಕಳಿಗಾಗಿ ಸ್ವರ್ಣಂ ಕೃಷ್ಣ ವೇಷ ಸ್ಪರ್ಧೆ ಸ್ವರ್ಣಂ ಜ್ಯುವೆಲ್ಲರಿಯ ಆವರಣದಲ್ಲಿ ನಡೆಯಿತು. ಸೂಂತೋಡು ಡೆಂಟಲ್ ಕ್ಲಿನಿಕ್ನ ವೈದ್ಯೆ ಡಾ.ಶ್ರಮಿಕಾ ಸೂಂತೋಡು ಉದ್ಘಾಟಿಸಿದರು.ಕೆಜೆಯು ದ.ಕ. ಜಿಲ್ಲಾ
ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸ್ವರ್ಣಂ ಜ್ಯುವೆಲರಿ ಪಾಲುದಾರ ಸಂಜೀವ, ಭವಿತ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಚಂದ್ರಶೇಖರ್ ನಂಜೆ, ದಿವ್ಯ ನಂಜೆ, ನಳಿನಿ ಸೂರಯ್ಯ, ಕೆಜೆಯು ತಾಲೂಕು ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಗೀತಾಂಜಲಿ ಹಾಗು ನಳಿನಾಕ್ಷಿ ಕಲ್ಮಡ್ಕ ತೀರ್ಪುಗಾರರಾಗಿದ್ದರು. ಸ್ವರ್ಣಂ ಜ್ಯುವೆಲರಿಯ ಆಡಳಿತ ಪಾಲುದಾರರಾದ ಪ್ರವೀಣ್ ಗೌಡ,ಸಂಜೀವ, ಲೋಕೇಶ್, ಉಪಸ್ಥಿತರಿದ್ದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. 2 ವಿಭಾಗಗಳಲ್ಲಿ ನಡೆದ

ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಬಹುಮಾನ ವಿಜೇತರು: 0-2 ವರ್ಷ ಪ್ರಥಮ ಹಿಮಾಂಶು ಎ, ದ್ವಿತೀಯ ಪೂಜ್ಯ ಬೊಳುಗಲ್ಲು, ತೃತೀಯ ಜಿಯಾಂಶಿ ಕಟ್ಟ, ಸಮಾಧಾನಕರ ಬಹುಮಾನ ವೇದಾಂಶಿ ಎಂ.ಡಿ., ಅಹನ ಯು., 2-5 ವರ್ಷ ಪ್ರಥಮ ದೀಪಾಂಶಿ ಎಂ.ವಿ., ದ್ವಿತೀಯ ದಿಶಾನ್ಯ ಶ್ಯಾಮ್ ಪಿ.ಎಸ್., ತೃತೀಯ ಜೈತಿಕ್ ಪಿ., ಸಮಾಧಾನಕರ ಬಹುಮಾನ ಇಶಾನಿ ದೇವಿ ಬಿ ವೈ, ಆರ್ವಿ ಬೋರ್ಕರ್ ಪಡೆದುಕೊಂಡರು.ಸ್ವರ್ಣಂ ಜ್ಯುವೆಲ್ಸ್ನ ಸಂಜೀವ, ಅಶ್ವಿನಿ ಪ್ರವೀಣ್ ಗೌಡ, ಶೋಧನ್, ಷಡಕ್ಷರಿ,ಕೆಜೆಯು ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಪ್ರವೀಣ್, ನವೀನ್,ಮೋನಿಷಾ ಸಹಕರಿಸಿದರು.










