ತಿರುವನಂತಪುರಂ:ಕಳೆದ ಒಂದೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ,ಫೇಸ್ಬುಕ್, ವಾಟ್ಸಾಫ್ ಸ್ಟೇಟಸ್ ತುಂಬಾ 1980–90 ದಶಕದ ಫ್ಯಾಷನ್ ಚಿತ್ರಗಳೇ ರಾರಾಜಿಸುತಿದೆ. ಇದೇನು ಹಳೆಯ ಚಿತ್ರಗಳ ಕಲರವ ಎಂದು ಹುಬ್ಬೇರಿಸಬೇಡಿ.. ಇದು ಜಸ್ಟ್ ಎಐ ಮಹಿಮೆ..ಅಸ್ಟೇ.. ಚಾಟ್ಜಿಪಿಟಿ ಯಂತಹಾ ಎಐ ಟೂಲ್ ಮೂಲಕ
ನಿಮ್ಮ ಯಾವುದೇ ಚಿತ್ರಗಳನ್ನು ನೀಡಿ 80, 90ರ ರೆಟ್ರೋ ಲುಕ್ ರಚಿಸಿ ಅಂತ ಟೈಪ್ ಮಾಡಿ.. ಕ್ಷಣ ಮಾತ್ರದಲ್ಲಿ ನಿಮ್ಮನ್ನು 80ರ 90ರ ದಶಕದ ಫ್ಯಾಷನ್ ವರ್ಣ ಚಿತ್ರಗಳಾಗಿ ಮಾರ್ಪಡಿಸುತ್ತದೆ. ಈ ರಿತಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಳೆಯ ಶೈಲಿಗೆ ಬದಲಾಯಿಸಿಕೊಂಡು ಶೇರ್ ಮಾಡುವುದು ಸಕತ್ ಟ್ರೆಂಡಿಂಗ್ ಆಗಿದೆ.ಎಲ್ಲರೂ 80, 90ರ ಸುಂದರ, ಸುಂದರಿಯರಾಗಿ ಮಾರ್ಪಾಡಾಗಿ

ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತುದ್ದಾರೆ. ‘ರೆಟ್ರೋ ಲುಕ್ ಫೋಟೊ ಟ್ರೆಂಡ್’ಗೆ ನೆಟ್ಟಿಗರು ಮಾರು ಹೋಗಿದ್ದು ಜನರು ತಮ್ಮ ಫೋಟೊಗಳನ್ನು 80 ಹಾಗೂ 90 ದಶಕದ ಕೇಶ ವಿನ್ಯಾಸ, ಲುಕ್ ಮತ್ತು ಉಡುಪಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರೂ ಈ ಟ್ರೆಂಡ್ಗೆ ಮಾರುಹೋಗಿದ್ದಾರೆ. ಕಿರುತೆರೆ, ಹಿರಿತೆರೆ ಕಲಾವಿದರು ಕೂಡ ತಮ್ಮ ಫೋಟೊಗೆ ರೆಟ್ರೋ ಟಚ್ ಕೊಟ್ಟಿದ್ದಾರೆ. ಜೊತೆಗೆ

ಇನ್ಸ್ಟಾಗ್ರಾಂ, ಫೇಸ್ ಬುಕ್, ವಾಟ್ಸಾಪ್ಗಳಲ್ಲಿ ಫೋಟೊ ಹಂಚಿಕೊಂಡು ಸಂಭ್ರಮಿಸುತ್ತಾರೆ. ತಮ್ಮ ಪೋಟೋಗಳು ರೆಟ್ರೋ ರೂಪದಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಿವೆ ಎಂಬ ಕುತೂಹಲ ಕಾಡಿದೆ. ಒಟ್ಟಿನಲ್ಲಿ ರೆಟ್ರೋ ಲುಕ್ ಅಕ್ಷರಷಃ ಟ್ರೆಂಡಿಂಗ್ ಆಗಿದೆ. ಒಬ್ಬರೇ ಇರುವ ಪೊಟೋ, ಇಬ್ಬರು ಅಥವಾ ಹೆಚ್ಚು ಮಂದಿಯ ಪೋಟೋ ಹೀಗೆ ಯಾವುದೇ ಚಿತ್ರ ನೀಡಿದರೂ ಮಾರ್ಪಾಡು ಮಾಡಿ ಕೊಡುತ್ತದೆ.
ಚಾಟ್ ಜಿಪಿಟಿಯಂತಹಾ
ಎಐ ಪ್ರಾಂಪ್ಟ್ಗಳನ್ನು
ಬಳಸಿ ನಿಮ್ಮ ಚಿತ್ರಗಳನ್ನು ಹಳೆಯ ಫ್ಯಾಷನ್ ಲೋಕದತ್ತ ಕೊಂಡೊಯ್ಯಬಹುದು. ಒಮ್ಮೆ ನೀವೂ ಟ್ರೈ ಮಾಡಿ ನೋಡಿ..










