ಪಂಜ: ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ವತಿಯಿಂದ ದೀಪಾವಳಿ ಪ್ರಯುಕ್ತ ಪಂಜ ದೇವಸ್ಥಾನದ ಬಳಿ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಕೇಂದ್ರದಲ್ಲಿ ಅ.31 ರಂದು ಯಕ್ಷಗಾನ ತಾಳಮದ್ದಳೆ ನಡೆಯಿತು.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ” ಯಕ್ಷಗಾನ ಎಂಬುದು
ಮುಖ್ಯವಾಗಿ ನಮ್ಮ ಸಂಸ್ಕಾರ ,ಸಂಸ್ಕೃತಿ ಕಲಿಸುವ ಕಲೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಬಾಲಕೃಷ್ಣ ಗೌಡ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು.
ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಆನಂದ ಗೌಡ ಜಳಕದಹೊಳೆ, ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಭಾಗವತ ಪ್ರಶಾಂತ್ ರೈ ಪಲ್ಲೋಡಿ, ಚೆಂಡೆ-ಮದ್ದಳೆ ವಾದಕ ಕುಮಾರ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಿದ್ಧ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ಜಯರಾಮ ಕಲ್ಲಾಜೆ ಸ್ವಾಗತಿಸಿದರು ವಂದಿಸಿದರು. ಪ್ರಶಾಂತ್ ರೈ ಪಲ್ಲೋಡಿ ಸನ್ಮಾನಿತರ ಪರಿಚಯಿಸಿದರು. ಉದ್ಘಾಟನೆಯ ಬಳಿಕ
ಪ್ರಸಂಗ ’ಅಹಲ್ಯೋದ್ಧರಣ-ಪರಶುರಾಮ ಗರ್ವಭಂಗ ‘ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ್ ರೈ ಪಲ್ಲೋಡಿ, ಚೆಂಡೆ-ಮದ್ದಳೆ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಶ್ರೀಧರ ವಿಟ್ಲ, ಗಗನ್ ಪಂಜ, ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ, ಸತ್ಯಶಂಕರ ಮಲೆಯಾಳ, ಪ್ರಸಾದ್ ಸವಣೂರು,ವೆಂಕಟೇಶ ಕುಮಾರ್ ಬಾಯಾರ ಹಾಗೂ ಯುವ ಭಾಗವತರಾದ ಸಾವಂತ್, ಅಂಕುಶ್ ಪಾಲ್ಗೊಂಡಿದ್ದರು.