ಪಂಜ:ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಜೇಸಿಐ ಪಂಜ ಪಂಚಶ್ರೀಯ ವತಿಯಿಂದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮ ಜೂ.5ರಂದು ನಡೆಯಿತು.ಜೇಸಿಐ ಪಂಜ ಪಂಚಶ್ರೀಯ ಬೆಳ್ಳಿ ಹಬ್ಬದ ಸ್ಮರಣೆಗೋಸ್ಕರ ದಾನಿಗಳ ಸಹಾಯದಿಂದ ನಿರ್ಮಿತಗೊಂಡ ದೇವಳದ ಗದ್ದೆಯಲ್ಲಿ ನಾಲ್ಕನೇ ವರ್ಷದ
ಭತ್ತದ ಸಾಗುವಳಿ ಮಾಡಲಾಯಿತು. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಕಾರ್ಯಕ್ರಮವನ್ನು ಭತ್ತ ಸಾಗುವಳಿ ಮಾಡುವುದರ ಮೂಲಕ ಉದ್ಘಾಟಿಸಿದರು. ಪೈಂದೋಡಿ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಗೌಡ ಕುದ್ವ, ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮ್ಯಾಲಪ್ಪ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಧರ್ಮ ಪಾಲ ಮರಕ್ಕಡ, ಮಾಲಿನಿ ಕುದ್ವ, ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾಗಿರುವ ಪರಮೇಶ್ವರ ಗೌಡ ಬಿಳಿಮಲೆ, ಸಾರ್ವಜನಿಕ ಆರಾಧನಾ

ಸಮಿತಿಯ ಖಜಾಂಜಿ ಆನಂದ ಜಳಕದಹೊಳೆ, ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ, ಸ್ಥಾಪಕ ಅಧ್ಯಕ್ಷ ದೇವಿಪ್ರಸಾದ್ ಜಾಕೆ, ರಜತ ವರ್ಷದ ಅಧ್ಯಕ್ಷ ಶಿವಪ್ರಸಾದ್ ಹಾಲಮಜಲು, ಪೂರ್ವಾಧ್ಯಕ್ಷರಾದ ತೀರ್ಥಾನಂದ ಕೊಡಂಕೆರಿ, ನಾಗಮಣಿ ಕೆದಿಲ, ಸುದರ್ಶನ ಪಟ್ಟಾಜೆ ಸದಸ್ಯರಾದ ದೇವಿಪ್ರಸಾದ್ ಚಿಕ್ಮುಳಿ, ಗಗನ್ ಕಿನ್ನಿಕುಮೇರಿ, ಷಣ್ಮುಖ ಕಟ್ಟ, ಕೃಷಿ ಇಲಾಖೆ ಕರ್ನಾಟಕ ಸರಕಾರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ನಿಂತಿಕಲ್ಲು ಇದರ ವ್ಯವಸ್ಥಾಪಕರಾದ ಬಾಲಕೃಷ್ಣ ಪಾಠಾಳಿ, ದೇವಳದ ಸಿಬ್ಬಂದಿಯಾಗಿರುವ ಕೃಷ್ಣಪ್ಪ ಜಳಕದ ಹೊಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.