ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಮೂರನೇ ದಿನವಾದ ಅ.13ರಂದು ರಾತ್ರಿ ನವರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು,ಭಕ್ತಾದಿಗಳು ಪಾಲ್ಗೊಂಡಿದ್ದರು.ಅ.13 ರಂದು ಪಂಬೆತ್ತಾಡಿಯ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಕಲಾ ಸೇವೆಯಲ್ಲಿ ಅದಿತಿ ಲಕ್ಷ್ಮಿ ನಾಯರ್ಕೆರೆ ಮತ್ತು ವರ್ಷ ನೆಲ್ಲಿಗದ್ದೆ ಭೈರವಿ ನಾಟ್ಯಾಲಯ ಐವರ್ನಾಡು ಇವರಿಂದ

ಭರತನಾಟ್ಯ ನಡೆಯಿತು. ಸ.14 ರಂದು ಸಿದ್ದಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಬೀದಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ ಮತ್ತು ಕಲಾ ಸೇವೆಯಲ್ಲಿ ಸ್ತುತಿ ರೈ ಐಗಿರಿ ಅಡ್ಡಬೈಲು ಮತ್ತು ಚರಿಷ್ಮಾ ರೈ ಪಲ್ಲೋಡಿ ಅವರಿಂದ ಭರತನಾಟ್ಯ ನಡೆಯಲಿದೆ.










