ಪಂಜ:ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 2024ರ ಪದಾಧಿಕಾರಿಗಳ ಆಯ್ಕೆಯು ಪಂಜ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿತು.ಅಧ್ಯಕ್ಷರಾಗಿ ಸಂತೋಷ್ ಜಾಕೆ, ಉಪಾಧ್ಯಕ್ಷರಾಗಿ ಗುರುಪ್ರಸಾದ್ ತೋಟ, ಕಾರ್ಯದರ್ಶಿಯಾಗಿ ಕೇಶವ ಗೌಡ ಕುದ್ವ, ಖಜಾಂಜಿಯಾಗಿ ವಾಸುದೇವ ಮೇಲ್ಪಾಡಿ ಆಯ್ಕೆಯಾದರು.ಜೊತೆ ಕಾರ್ಯದರ್ಶಿಯಾಗಿ
ಭರತ್ ತೋಟ, ಯಶವಂತ ಕಣ್ಕಲ್, ಪ್ರಜ್ವಲ್ ಚಿದ್ಗಲ್, ಸುಜಿತ್ ಪಂಬೆತ್ತಾಡಿ ಯವರನ್ನು ಆಯ್ಕೆ ಮಾಡಲಾಯಿತು.ಆರಾಧನ ಸಮಿತಿ ಅಧ್ಯಕ್ಷ ಸವಿತಾರಾ ಮುಡೂರು ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ವೇದಿಕೆಯಲ್ಲಿ ಆರಾಧನ ಸಮಿತಿಯ ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಖಜಾಂಜಿ ಆನಂದ ಜಳಕದಹೊಳೆ ಉಪಸ್ಥಿತರಿದ್ದರು. 3 ದಿನಗಳ ಕಾಲ ನಡೆಯುವ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಿಂದ 9ರ ತನಕ ನಡೆಯಲಿದೆ.