ಸುಳ್ಯ: ಒಬ್ಬ ಕಲಾವಿದ ಇಪ್ಪತ್ತನಾಲ್ಕು ಪಾತ್ರ ನಿರ್ವಹಿಸಿದ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಜಂಕಾರ್ ಮ್ಯೂಸಿಕ್ ಮೂವೀಸ್” ನಲ್ಲಿ ನೋಡಲು ಲಭ್ಯವಿದೆ ಎಂದು ಚಿತ್ರದ ನಿರ್ದೇಶಕ
ಸಂತೋಷ್ ಕೊಡೆಂಕೇರಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಬ್ಬ ಕಲಾವಿದ. ಇಪ್ಪತ್ತ ನಾಲ್ಕು

ಪಾತ್ರಗಳು. ನಾಲ್ಕು ಹಾಡುಗಳು ಹನ್ನೆರಡು ಪ್ರಾಸಂಗಿಕ ಹಾಡುಗಳು ಹೊಂದಿರುವ ಶ್ರೀ. ರವೀಂದ್ರನಾಥ್ ಠಾಗೂರ್ ಅವರ ಕಾದಂಬರಿ ಆಧರಿತ ಚಿತ್ರ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಒಂದು ರಂಗಭೂಮಿ ಅನುಭವದ ಚಿತ್ರ. ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ… “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ” ಶ್ರೀ ರವೀಂದ್ರನಾಥ್ ಠಾಗೂರ್ ಅವರ “Once There was a King ಕಾದಂಬರಿಯನ್ನು ರಂಗ ರೂಪಕ್ಕೆ ತಂದು ರಂಗಭೂಮಿಯ ಮೇಲೆ ಇಪ್ಪತ್ತೊಂದು ವರ್ಷಗಳ ಹಿಂದೆ ಯೋಗೇಶ್ ಮಾಸ್ಟರ್ ಅವರು ಮಾಡಿದ ಏಕವ್ಯಕ್ತಿ ಪದರ್ಶನದ ಪುಯೋಗ ಇದು.

ಈ ಪಯೋಗವನ್ನು, ರಂಗಭೂಮಿಯಿಂದ ಚಲನಚಿತ್ರ ಮಾದ್ಯಮಕ್ಕೆ ತರುವ ಸಾಹಸ ಮಾಡಿದ್ದು ದೃಷ್ಟಿ ಮೀಡಿಯಾ ಸಂಸ್ಥೆ, ಸಿನಿಮಾ ಮಾಧ್ಯಮದಲ್ಲಿ ರಂಗಭೂಮಿಯಲ್ಲಿ ಇರುವ ಇತಿಮಿತಿಗಳನ್ನು ಮೀರಲು ಸಾಧ್ಯವಾಯಿತು. ಮೇಕಪ್, ಅಗತ್ಯದ ವೇಷಭೂಷಣ, ಬೆಳಕು ಮತ್ತು ಅಭಿನಯದ ಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಒಟ್ಟಾರೆ ಹೇಳುವುದಾದರ ರಂಗ ಪುಯೋಗದ ಸ್ವರೂಪವನ್ನು ಬದಲಿಸದೇ ಅದನ್ನು ಸಿನಿಮಾದ ಮೂಲಕ ಮತ್ತಷ್ಟು ಕುಸುರಿಗೊಳಿಸುವ ಕೆಲಸ
ಇದಾಗಿದೆ.”ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರವು ಸೆ.9 ರಂದು “ಜಂಕಾರ್ ಮ್ಯೂಸಿಕ್ ಮೂವೀಸ್ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಗೊಂಡಿದೆ. ಈ ಕಲಾತ್ಮಕ ಚಿತ್ರಕ್ಕೆ ಕಲಾಸಕ್ತರ ಪ್ರೋತ್ಸಾಹ ಅಗತ್ಯ ಇದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾವನಾ ಸಂತೋಷ್, ಶಿವರುದ್ರಯ್ಯ ಎಸ್.ವಿ, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕೇರಿ ಉಪಸ್ಥಿತರಿದ್ದರು.











