ಪೆರುವಾಜೆ:ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಹಾಗೂ ಸೇವಾ ಭಾರತೀ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ ಇದರ ಸಹಯೋಗದಲ್ಲಿ ಹತ್ಯೆಗೀಡಾದ ಬಿಜೆಪಿ ಯುವಮೋರ್ಚಾ ಮುಖಂಡ ದಿ.ಪ್ರವೀಣ್ ನೆಟ್ಟಾರು ಸ್ಮೃತಿ ದಿನ ಕಾರ್ಯಕ್ರಮ ಹಾಗೂ ಕಾರ್ಗಿಲ್ ವಿಜಯ ದಿವಸ ಆಚರಣೆ,
ರಕ್ತದಾನ ಶಿಬಿರ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಪೆರುವಾಜೆ ಜೆ.ಡಿ. ಅಡಿಟೋರಿಯಂನಲ್ಲಿ ನಡೆಯಿತು.ದ.ಕ.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದಿ.ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ ಪೂಜಾರಿ ತಾಯಿ ರತ್ನಾವತಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಬಿಜೆಪಿ ಯುವ ಮೋರ್ಚಾ
ಸುಳ್ಯ ಮಂಡಲ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ದ.ಕ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ,ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷ ಡಾ.ಮನೋಜ್ ಕುಮಾರ್ ಅಡ್ಡಂತಡ್ಕ,
ದ.ಕ.ಬಿ.ಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ,ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್, ಶಿವಾನಂದ ಕುಕ್ಕುಂಬಳ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಸ್ವಾಗತಿಸಿ, ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ರಾಜೇಶ್ ಕಿರಿಭಾಗ ವಂದಿಸಿ,ಹರ್ಷಿತ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಮನೆಯ ಸಮೀಪವಿರುವ ದಿ.ಪ್ರವೀಣ್ ನೆಟ್ಟಾರು ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆ ಮತ್ತು ಬಿಜೆಪಿ ಸುಳ್ಯ ಮಂಡಲದ ಪ್ರಮುಖರು,ಕಾರ್ಯಕರ್ತರು ಹಾಗೂ ಬೆಳ್ತಂಗಡಿ ಯುವಮೋರ್ಚಾದ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ 60 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.