ಆಲೆಟ್ಟಿ:ಜನನಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಕಳೆದ ವರ್ಷದಿಂದ ಆಲೆಟ್ಟಿಯಲ್ಲಿ ಪ್ರಾರಂಭಿಸಿದ ಮೊಸರು ಕುಡಿಕೆ ಉತ್ಸವದ ಎರಡನೇ ವರ್ಷದ ಉತ್ಸವವನ್ನು ಗ್ರಾಮ ಮಟ್ಟದಲ್ಲಿ ಇರುವ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಿಂದ ಆಚರಿಸುವ ಸಲುವಾಗಿ ನೂತನ ಉತ್ಸವ ಸಮಿತಿಯನ್ನು ರಚಿಸಲಾಯಿತು.ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ
ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಇದರ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು.
ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾಗಿ ಉದಯ ಕುಡೆಕಲ್ಲು ರವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಸುರೇಶ್ ಆಲೆಟ್ಟಿ, ಕೋಶಾಧಿಕಾರಿಯಾಗಿ ಶ್ರೀನಾಥ್ ಆಲೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಸೆ.1 ರಂದು ಉತ್ಸವವು ನಡೆಯಲಿದ್ದು
ಗ್ರಾಮದ ಎಲ್ಲಾ ಭಾಗದಿಂದ ಪ್ರಮುಖರನ್ನು ಆಯ್ಕೆ ಮಾಡಿ ಗೌರವ ಸಲಹೆಗಾರರನ್ನಾಗಿ 21 ಮಂದಿಯ ಸಮಿತಿ ರಚಿಸಲಾಯಿತು. ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಗೌರವಾಧ್ಯಕ್ಷ ಲತೀಶ್ ಗುಂಡ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾ ಅಲೆಟ್ಟಿ, ಸದಸ್ಯ ಶಿವಾನಂದ ರಂಗತ್ತಮಲೆ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಉಪಾಧ್ಯಕ್ಷ ಶ್ರೀನಾಥ್ ಆಲೆಟ್ಟಿ ಉಪಸ್ಥಿತರಿದ್ದರು.