ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿಗಳಲ್ಲಿ ಚುನಾವಣಾ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಪ್ರಣಾಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಮ್. ಕೆ ಶ್ರೀಧರ್ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಚುನಾವಣಾ ಪ್ರಣಾಳಿಕೆಯ ಮೂಲಕ
ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗಿರುವ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಸಾಧ್ಯ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ದ ಗುಣವನ್ನು ಬೆಳೆಸುವಲ್ಲಿ ಸಹಕಾರಿ ಎಂದರು.
2024-25 ನೇ ಸಾಲಿನಲ್ಲಿ ಚುನಾವಣಾ ಕಣಕ್ಕಿಳಿದ ವಿದ್ಯಾರ್ಥಿಗಳೆಲ್ಲರೂ ಚುನಾವಣಾ ಪ್ರಣಾಳಿಕೆಯ ಮೂಲಕ ಮತ ಯಾಚಿಸಲಾಯಿತು. ಎಂಟನೇ ತರಗತಿಯ ಪ್ರತೀಕ್ಷ ಮತ್ತು ನಿಧಿ ನಿರೂಪಿಸಿದರು. ಆಕೃತಿ ಸ್ವಾಗತಿಸಿ, ಮೋದಕ್ ವಂದಿಸಿದರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್,ಉಪ ಪ್ರಾಂಶುಪಾಲೆ ಶಿಲ್ಪಬಿದ್ದಪ್ಪ ಉಪಸ್ಥಿತರಿದ್ದರು. ಸಮಾಜವಿಜ್ಞಾನದ ಶಿಕ್ಷಕಿಯಾರಾದ ಧನ್ಯ, ಶೋಭಾ ಕಾರ್ಯಕ್ರಮ ಸಂಯೋಜಿಸಿದರು . ಕೆವಿಜಿ ಡೆಂಟಲ್ ಕಾಲೇಜಿನ ಡಾ. ಅನುಜ್ಞ ಮತ್ತು ಡಾ. ಶಿಧಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.