ಮಂಡೆಕೋಲು:ಮಂಡೆಕೋಲು ಕಣೆಮರಡ್ಕ ಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 3ನೇ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶನೈಶ್ಚರ ಪೂಜಾ ಕಾರ್ಯಕ್ರಮ ಎ.9ರಂದು ನಡೆಯಲಿದೆ. ಜ.5ಕ್ಕೆ ನಡೆಯಬೇಕಾಗಿದ್ದ
ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶನೈಶ್ಚರ ಪೂಜೆ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲಾಗಿತ್ತು. 9 ರಂದು ಬೆಳಿಗ್ಗೆ 6 ರಿಂದ ಗಣಪತಿ ಹವನ, 7ಕ್ಕೆ ಗುಳಿಗ ದೈವದ ತಂಬಿಲ. ಪೂ.9.30ರಿಂದ ಶನೈಶ್ಚರ ಪೂಜಾ ಸಂಕಲ್ಪ, ಅಪರಾಹ್ನ 12ಕ್ಕೆ ಶನೈಶ್ಚರ ಪೂಜಾ ಮಹಾ ಮಂಗಳಾರತಿ. 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನದಾನ, ಸಂಜೆ 7ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಶಬರಿಗಿರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕಣೆಮರಡ್ಕ ತಿಳಿಸಿದ್ದಾರೆ.