ಸುಳ್ಯ:ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ
ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ.ಪಂದ್ಯಾಟ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸುವ ಸಾಧ್ಯತೆ ಇದೆ. ನೂರಾರು ವಾಹನಗಳು ನಗರಕ್ಕೆ ಹರಿದು ಬರಲಿದೆ. ವಾಹನ ದಟ್ಟಣೆ ಉಂಟಾಗದಂತೆ ವಾಹನ ಪಾರ್ಕಿಂಗ್ ಮಾಡಲು ಸಂಘಟಕರು ಸ್ಥಳ ಸೂಚಿಸಿದ್ದಾರೆ. ಚೆನ್ನಕೇಶವ ದೇವಸ್ಥಾನದ ಮುಂಭಾಗದ ಎರಡು ಮೈದಾನ, ಎಪಿಎಂಸಿ ಪ್ರಾಂಗಣದ ಮೈದಾನ, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಮುಂಭಾಗದ ಮೈದಾನದಲ್ಲಿ ವಾಹನ ಪಾರ್ಕ್ ಮಾಡಲು ಸ್ಥಳ ನಿಗದಿಪಡಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಪಂದ್ಯಾಕೂಟದ ಟಿಕೆಟ್ ಲಭಿಸುವ ಸ್ಥಳ:
ಪಂದ್ಯಾಟದ ಟಿಕೆಟ್ ಸುಳ್ಯದ ಸಂಘಟನಾ ಸಮಿತಿಯ ಕಚೇರಿ, ಕಲ್ಲುಗುಂಡಿ ಎಸ್ಪಿ ಲೋಕನಾಥ್ ಅವರ ಶಾಮಿಯಾನ ಕಚೇರಿಯಲ್ಲಿ, ಬೆಳ್ಳಾರೆ ಸ್ಟಾಂಡರ್ಡ್ ಮೈಕ್ ಹಾಗೂ ಸುಬ್ರಹ್ಮಣ್ಯದಲ್ಲಿ ಎನ್.ಎಸ್.ರಾಜೇಶ್ ಅವರ ಶಾಮಿಯಾನ ಅಂಗಡಿಯಲ್ಲಿ ಟಿಕೆಟ್ ಲಭಿಸಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.












