ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ಅಮೃತಭವನದಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಶ್ರೀಹರಿ ಪೈಂದೋಡಿಯವರಿಗೆ ಕಲಾ ಶ್ರೀ ಪ್ರಶಸ್ತಿ, ರಾಮಕೃಷ್ಣ ಗೌಡ ಕುದ್ಕಳಿಯವರಿಗೆ ಪಯಸ್ವಿನಿಶ್ರೀ ಪ್ರಶಸ್ತಿ ಮತ್ತು ಅಶೋಕ್ ಚೂoತಾರ್ ಅವರಿಗೆ ಕಮಲ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತ
ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಹಾಗೂ ಜೋನ್ ಛೇರ್ಮನ್ ಸತೀಶ್ ಪೂಜಾರಿ ಭಾಗವಹಿಸಿದ್ದರು. ಘಟಕಧ್ಯಕ್ಷ ನವೀನಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಳ್ಯ ಪಯಸ್ವಿನಿ ಯ ಪೂರ್ವಧ್ಯಕ್ಷ ಎ.ಕೆ. ಮೋಹನ್ ಅಭಿನಂದನಾ ಭಾಷಣ ಮಾಡಿದರು. ವಲಯ ಉಪಾಧ್ಯಕ್ಷ ದೇವರಾಜ್ ಕುದುಪಾಜೆ, ವಲಯಾಧಿಕಾರಿ ಗುರುರಾಜ್ ಅಜ್ಜಾವರ, ಜೋನ್ ವೈಸ್ ಛೇರ್ಮನ್ ಪ್ರಶಾಂತ್ ಕುಮಾರ್ ರೈ, ಕಾರ್ತೀಕ್, ಪಯಸ್ವಿನಿ ಚಾರಿಟೇಬಲ್ ಅಧ್ಯಕ್ಷ ಜಯಪ್ರಕಾಶ್ ಕಾನತ್ತಿಲ, ಪಯಸ್ವಿನಿ ಸೀನಿಯರ್ ಲೀಸನ್ ನ ಅಧ್ಯಕ್ಷ ಪಿ.ಎಸ್.ಗಂಗಾಧರ ನಿಕಟಪೂರ್ವಧ್ಯಕ್ಷ ರಂಜಿತ್ ಕುಕ್ಕೇಟಿ ಉಪಸ್ಥಿತರಿದ್ದರು. ಗುರುಪ್ರಸಾದ್ ಅತಿಥಿಗಳನ್ನು
ವೇದಿಕೆಗೆ ಆಹ್ವಾನಿಸಿದರು ಲತಾ ಸುಪ್ರೀತ್ ಮೊಂಟಡ್ಕ, ತಾರಾ ಗೌಡ, ಶೋಭಾ ಅಶೋಕ್, ಚೈತನ್ಯ ದೇವರಾಜ್, ಸುನಿತಾ ರವಿಕುಮಾರ್ ಸನ್ಮಾನ ಪತ್ರ ವಾಚಿಸಿದರು.ಸುರೇಶ್ ಕಾಮತ್ ವಂದಿಸಿದರು..