ಮಂಗಳೂರು: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸುವ ಹಲಸು ಹಬ್ಬ ಮೇ.24ರಂದು ಶರವು ದೇವಳದ ಸಮೀಪ
ಬಾಳಂಭಟ್ ಸಭಾಂಗಣದಲ್ಲಿ ಮೇ 24 ಶನಿವಾರ ಮತ್ತು 25 ಭಾನುವಾರ ನಡೆಯಲಿದೆ. ವೈವಿದ್ಯಮಯ ಹಲಸು ಪ್ರದರ್ಶನ, ಮಾರಾಟ, ಹಲಸು ಖಾದ್ಯಗಳ ಮಳಿಗೆ, ಸಿರಿಧಾನ್ಯ ಪದಾರ್ಥಗಳು, ದೇಸಿ ಉತ್ಪನ್ನಗಳು, ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.