ಸುಳ್ಯ: ಬಿಎಂಎಸ್ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಸಭೆ ಸಂಘದ ಕಚೇರಿ ತಿಲಕ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ಗಿರೀಶ್ ಭಾರಧ್ವಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ
ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ, ಕೋಶಾಧಿಕಾರಿ ರವಿ ಎಸ್ , ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್, ಜಾಲ್ಸೂರು ಸಂಘದ ಅಧ್ಯಕ್ಷ ಗೋಪಾಲ ಪದವು ಸಂಘದ ನಿರ್ದೇಶಕರಾದ ಶಿವಾನಂದ ಗೋಪಿಕಾ, ಲೋಕೇಶ್ ಬಸ್ ನಿಲ್ದಾಣ, ಪ್ರದೀಪ್ ರಥಬೀದಿ, ಜನಾರ್ದನ ಶ್ರೀರಾಮ್ ಪೇಟೆ, ರೋಹಿತ್ ಗಾಂಧಿನಗರ, ಕಾರ್ತಿಕ್ ಗಾಂಧಿನಗರ, ಶಂಕರ ಕುರುಂಜಿಭಾಗ್, ವೇಣು ಗೋಪಾಲ ಕುರುಂಜಿಭಾಗ್, ಹರೀಶ್ ನೆಕ್ರಾಜೆ, ಮಹೇಶ್ ಜಟ್ಟಿಪಳ್ಳ, ಚಾಮಯ್ಯ ಮಾರ್ಕೆಟ್ ರಸ್ತೆ. ಉಪಸ್ಥಿತರಿದ್ದರು





