ಟೆಕ್ಸಾಸ್: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯಗಳಲ್ಲಿ ಐವರಿ ಕೋಸ್ಟ್ ವಿರುದ್ಧ 2-1 ಗೋಲುಗಳ ಜಯ ಗಳಿಸಿರುವ ಜರ್ಮನಿ ನೌಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ಮತ್ತೊಂದು ಪಂದ್ಯದಲ್ಲಿ ಸ್ವೀಡನ್ ವಿರುದ್ಧ ನೆದರ್ಲೆಂಡ್ಸ್ 5-1 ಗೋಲುಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.ಡೆನಿಜ್ ಉಂಡಾವ್ ಗಳಿಸಿದ
ಎರಡು ಗೋಲುಗಳ ನೆರವಿನಿಂದ ಜರ್ಮನಿ ನಾಕೌಟ್ ಹಂತವನ್ನು ಪ್ರವೇಶಿಸಿತು. ಐವರಿ ಕೋಸ್ಟ್ ಪರ ಫ್ರಾಂಕ್ ಕೆಸ್ಸಿ ಗೋಲು ಗಳಿಸಿದರು. ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಜರ್ಮನಿ ಆರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ನಾಕೌಟ್ ಪ್ರವೇಶಿಸಿದ ಮೂರನೇ ತಂಡವೆನಿಸಿದೆ.
ಎಫ್’ ಗುಂಪಿನ ನೆದರ್ಲೆಂಡ್ಸ್ ಅಬ್ಬರದ ಮುಂದೆ ಸ್ವೀಡನ್ ಮಂಕಾಯಿತು. ಈ ಗೆಲುವಿನೊಂದಿಗೆ ಎಫ್ ಗುಂಪಿನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲಿನೊಂದಿಗೆ ನಾಲ್ಕು ಅಂಕಗಳೊಂದಿಗೆ ನೆದರ್ಲೆಂಡ್ಸ್ ಅಗ್ರಸ್ಥಾನ ಕಾಪಾಡಿಕೊಂಡಿದೆ. ಬ್ರಿಯಾನ್ ಬ್ರೋಬಿ , ಕೋಡಿ ಗಕ್ಪೊ ತಲಾ ಎರಡು ಬಾರಿ ಗೋಲು ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಕ್ರಿಸೆನ್ಸಿಯೊ ಸಮ್ಮರ್ವಿಲ್ಲೆ ಮಗದೊಂದು ಗೋಲು ದಾಖಲಿಸಿದರು. ಸ್ವೀಡನ್ ಪರ ಆಂಥನಿ ಎಲಂಗಾ 59ನೇ ನಿಮಿಷದಲ್ಲಿ ಸಮಾಧಾನಕರ ಗೋಲು ದಾಖಲಿಸಿದರು.







