ಸುಳ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಬೋಳುಗಲ್ಲು ತರವಾಡು ದೈವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಆಗಮಿಸಿ ದೇವರ

ಆಶೀರ್ವಾದ ಪಡೆದರು.ಈ ಸಂಧರ್ಭದಲ್ಲಿ
ಅವರನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಸದಸ್ಯರಾದ ಶುಭಕರ ಬೊಳುಗಲ್ಲು, ಶಿವರಾಮ ಕೇನಾಜೆ, ಅರ್ಚಕರಾದ ಶಿವಪ್ರಸಾದ ಭಟ್ , ಗೀತಾಂಜಲಿ ಬೊಳುಗಲ್ಲು, ಉಜ್ವಲ್ ಕಜ್ಜೋಡಿ, ನಾರಾಯಣ ಗೌಡ,ಮೊದಲಾದವರು ಉಪಸ್ಥಿತರಿದ್ದರು.