ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ನೇತೃತ್ವದಲ್ಲಿ ಕೊಡಿಯಾಲಬೈಲ್ ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ ಸುಳ್ಯ ಪೊಲೀಸ್ ಠಾಣೆಯಲ್ಲಿ ನಡೆಯಿತು. ಠಾಣಾ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ. ಪಿ ಅವರು ಪೊಲೀಸ್ ಠಾಣೆಯ ಕಾರ್ಯಚಟುವಟಿಕೆಗಳ ಬಗ್ಗೆ
ಮಾಹಿತಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ, ಸಂಚಾರ ನಿಯಮ, ಪೋಕ್ಸೋ ಕಾಯಿದೆ, ಮಕ್ಕಳ ಕಾನೂನು ಕುರಿತು ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ ಕಾನ್ಸ್ಟೇಬಲ್ ಜ್ಯೋತಿ ಮಾಹಿತಿ ನೀಡಿದರು.
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಎಂ. ಜಿ. ಎಂ ಸಂಸ್ಥೆಯ ಸಂಚಾಲಕ ದೊಡ್ಡಣ್ಣ ಬರೆಮೇಲು, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಎನ್, ಜೇಸಿ ಕಾರ್ಯದರ್ಶಿ ತಾರಾ ಮಾಧವ ಚೂಂತಾರು, ಸತ್ಯ ಶಾಂತಿ ತ್ಯಾಗ ಮೂರ್ತಿ, ಪ್ರಶಾಂತ್ ಅಂಬೆಕಲ್ಲು, ಶಿಕ್ಷಕರಾದ ಚಿತ್ರಲೇಖಾ ಮಡಪ್ಪಾಡಿ, ಚೈತ್ರಾ ಬಿ ಡಿ, ಶಿವರಂಜಿನಿ, ದಿವ್ಯ ಎನ್, ಜಯಪ್ರಕಾಶ್ ಕೆ, ಪ್ರಮುಖರಾದ ಮೋಂಟಡ್ಕ ಮತ್ತಿತರರು ಇದ್ದರು.








