ಮಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ತಲಾ 5 ಕೋಟಿಯಂತೆ ಐದು ವರ್ಷದಲ್ಲಿ 25 ಕೋಟಿ ಗಿಡ ನೆಡುವ ಗುರಿ ಇದೆ ಎಂದು ಕರ್ನಾಟಕ ರಾಜ್ಯ ಅರಣ್ಯ, ಜೀವಿ ಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಅವರು ಬಂಟ್ವಾಳ ತಾಲೂಕಿನ ಆಲಂಪುರಿ ಕಾವಳ ಪಡೂರು ಗ್ರಾಮ ಪಂಚಾಯತ್ ನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಅರಣ್ಯ ಇಲಾಖೆಯ ಮೂಲಕ ರಾಜ್ಯದಲ್ಲಿ ಹಮ್ಮಿಕೊಂಡ ಸಾಮಾಜಿಕ ಅರಣ್ಯೀಕರಣ ದಶಲಕ್ಷ ಗಿಡಗಳ
ನಾಟಿ ಯೋಜನೆ ಕಾರ್ಯಕ್ರಮದ ಉದ್ಘಾ ಟನೆ ನೆರವೇರಿಸಿ ಮಾತನಾಡುತ್ತಿದ್ದರು.ಕಳೆದ ವರ್ಷ 5 ಕೋಟಿ 43ಲಕ್ಷ ಗಿಡ ರಾಜ್ಯದಲ್ಲಿ ನೆಡಲಾಗಿದೆ.ಈ ಪೈಕಿ ಶೇ 85 ಯಿಂದ 90 ಶೇ ಗಿಡ ಉಳಿದಿದೆ.ಈ ಬಗ್ಗೆ ಸಾರ್ವಜನಿಕ ಆಡಿಟ್ ಮಾಡಿಸ ಲಾಗುವುದು.ಆದರೆ ಈಗಿನ ಪರಿಸ್ಥಿತಿಯಲ್ಲಿ ವಾರ್ಷಿಕ 10ಕೋಟಿ ಗಿಡ ನೆಟ್ಟರೂ ಸಾಲದು.ರಾಜ್ಯದಲ್ಲಿ ಶೇ 21 ಅರಣ್ಯ ಇದೆ.ಆದರೆ ನಮ್ಮ ಉಳಿವಿಗೆ ದೇಶದಲ್ಲಿ ಶೇ 33 ಅರಣ್ಯ ನಮ್ಮ ಉಳಿವಿಗಾಗಿ ಇರಬೇಕಾದ ಅಗತ್ಯವಿದೆ.ಸುಸ್ಥಿರ ಅಭಿವೃದ್ಧಿಗೆ ಹಸಿರು ಹೊದಿಕೆ ಅಗತ್ಯ. ಹೆಚ್ಚುತ್ತಿರುವ ತಾಪಮಾನ ಹವಾಮಾನ ಬದಲಾವಣೆಯಿಂದ ಆಗುತ್ತಿದೆ. ಜನರ ಉಳಿವಿಗೆ ಗಿಡಗಳ ಸಂರಕ್ಷಣೆ ಮುಖ್ಯ.ಪ್ರಾಣಿ ಮಾನವ ಸಂಘರ್ಷ ತಪ್ಪಿಸಲು ಸಹಜವಾದ ಅರಣ್ಯ ಬೆಳೆಸಲು ಹಾಗೂ ಪ್ರಾಣಿಗಳು ಜೀವಿಸಲು ಸೂಕ್ತವಾದ ಪರಿಸರವನ್ನು ಸಂರಕ್ಷಿಸಲು, ಏಕಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಕಡಿತಗೊಳಿಸಲು ಸರಕಾರದ ಜೊತೆ ಜನರು ಸಂಘ ಸಂಸ್ಥೆಗಳ ಮೂಲಕ ಪ್ರಯತ್ನಿ ಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಮಾರಂಭದಲ್ಲಿ ರಾಜ್ಯ ಸಭಾ ಸದಸ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಾ,ಗಿಡ ನೆಡುವ ಜೊತೆ ಮರಗಳ ಸಂರಕ್ಷಣೆ ಅತೀ ಅಗತ್ಯ. ಕಾಡಿನ ಜೊತೆ ವನ್ಯಜೀವಿಗಳ ಸಂರಕ್ಷಣೆಗಾಗಿ ಫಲಬರುವ ಗಿಡಗಳ ಸಂರಕ್ಷಣೆಯೂ ಮುಖ್ಯ. ನಮ್ಮ ಮುಂದಿನ ಜನಾಂಗದವರಿಗೆ ಈ ಪರಿಸರವನ್ನು ಸಂರಕ್ಷಿಸಿ ನೀಡಬೇಕಾಗಿದೆ ಎಂದರು.’ಸಾಮಾಜಿಕ ಅರಣ್ಯೀಕರಣ’ ಕಾರ್ಯಕ್ರ ಮದಡಿಯಲ್ಲಿ ಕಾಡಿನಲ್ಲಿ ಹಣ್ಣಿನ ಗಿಡ ನೆಡುವ ಯೋಜನೆಗೆಪೂರಕವಾಗುವಂತೆ ರಾಜ್ಯಾದ್ಯಂತ ‘ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ’ದ ಮೂಲಕ ಬಂಟ್ವಾಳ ತಾಲೂಕಿನ, ಕಾವಳಪಡೂರು ಗ್ರಾಮದ, ಆಲಂಪುರಿ, ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಪ್ರದೇಶದಲ್ಲಿಈ ವರ್ಷದಲ್ಲಿ 3 ಲಕ್ಷ ಕಾಡು ಹಣ್ಣಿನ ಗಿಡಗಳು, ಸುಮಾರು 7 ಲಕ್ಷ ಇತರ ಸಾಮಾಜಿಕ ಅರಣ್ಯಕ್ಕೆ ಪೂರಕವಾಗಿರುವ ಗಿಡಗಳನ್ನು ನೆಡುವ ಮೂಲಕ ರಾಜ್ಯದಲ್ಲಿ 10 ಲಕ್ಷ ಹಣ್ಣಿನ ಗಿಡಗಳನ್ನು ನೆಡಲಾಗುವುದು ನೀರಿನ ಸಂರಕ್ಷಣೆಗೆ ಪ್ರತಿ ವರ್ಷ ಸುಮಾರು 500 ಕೆರೆಗಳ ಹೂಳೆತ್ತಲಾಗುವುದು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಯು.ರಾಜೇಶ್ ನಾಯ್ಕ್ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.ಇದೇ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಅವಿನಾಶ್ ಕೊಡೆಂಕಿರಿತವರಿಗೆ ಅರಣ್ಯಮಿತ್ರ ಪ್ರಶಸ್ತಿ ವಿತರಿಸಿದರು.ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ಅರಣ್ಯ ಇಲಾಖೆಯ ಸಿಎಫ್ ಡಾ.ಕರಿಕಾಲನ್, ಕೆಸಿಡಿಸಿ ಎಂ.ಡಿ.ಕಮಲ ಕರಿಕಾಲನ್, ಡಿಸಿಎಫ್ ಆಂಟೊನಿ ಮರಿಯಪ್ಪ, ಎಸಿಎಫ್ ಶ್ರೀಧರ್,ಕಾವಳ ಪಡೂರು ಅಧ್ಯಕ್ಷ ಲಕ್ಷ್ಮೀ ನಾರಾಯಣ ಶರ್ಮ,ವಲಯ ಅರಣ್ಯಾಧಿ ಕಾರಿ ಪ್ರಪುಲ್ಲ ಶೆಟ್ಟಿ ,ಎಸ್ ಕೆ ಡಿ ಆರ್ ಡಿಪಿ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಮೊದಲಾದ ವರು ಉಪಸ್ಥಿತ ರಿದ್ದರು. ಗಣೇಶ್ ಪಿ. ಆಚಾರ್ಯ ಕಾರ್ಯ ಕ್ರಮ ನಿರೂಪಿಸಿ. ಎಸ್ ಕೆ ಡಿ ಆರ್ ಡಿಪಿಯ ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು