ಸುಳ್ಯ:ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ತಾಲೂಕು ಮಹಿಳಾ ಘಟಕದ ವತಿಯಿಂದ ನಡೆದ ಮಕ್ಕಳ ಮುಕ್ತ ಚೆಸ್ ಸ್ಪರ್ಧೆಯ ಸಮಾರೋಪ ಸಮಾರಂಭ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು. ಗೌಡ
ಮಹಿಳಾ ಘಟಕದ ಅಧ್ಯಕ್ಷೆ ವಿನುತ ಪಾತಿಕಲ್ಲು,ಸುಳ್ಯ ತಾಲೂಕು
ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಹರಿಪ್ರಸಾದ್ ಕೊಯಿಂಗಾಜೆ, ಮಹಿಳಾ ಘಟಕದ ಉಸ್ತುವಾರಿ ಸುರೇಶ್ ಎಂ.ಎಚ್, ಸುಪ್ರೀತ್ ಮೋಂಟಡ್ಕ,ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಸಂದೇಶ್ ಕೋಶಾಧಿಕಾರಿ ಜಯಶ್ರೀ ಪಲ್ಲತ್ತಡ್ಕ, ಚೆಸ್ ಸ್ಪರ್ಧೆ ಸಂಚಾಲಕಿ ಭಾರತಿ ಉಳುವಾರು, ಸಹ ಸಂಚಾಲಕಿ ತಾರಾ ಮಾಧವ ಬೆಳ್ಳಾರೆ ಮೊದಲಾದವರು
ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು. ವಿವಿಧ ವಿಭಾಗಗಳಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ
100 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.