ಹೊಸದಿಲ್ಲಿ: ದೇಶದ ಇಂಜಿನಿಯರಿಂಗ್ ವಿಸ್ಮಯಗಳಲ್ಲೊಂದಾದ ವಿಶ್ವದ ಅತ್ಯಂತ ಎತ್ತರದ ರೈಲ್ವೇ ಕಮಾನು ಸೇತುವೆ ಚೆನಾಬ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರಧಾನಿ ಚೆನಾಬ್ ಸೇತುವೆ ಸೇರಿದಂತೆ 46,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ದೇಶದ ಮೊದಲ ಕೇಬಲ್ ಆಧಾರಿತ ರೈಲ್ವೇ ಸೇತುವೆಯಾದ
ಅಂಜಿಗಾಟ್ ಹಾಗೂ ಉಧಂಪುರ-ಶ್ರೀನಗರ- ಬಾರಾಮುಲ್ಲಾ ರೈಲು ಲಿಂಕ್ ಯೋಜನೆಯನ್ನೂ ಅವರು ಉದ್ಘಾಟಿಸಲಿದ್ದಾರೆ. ಜತೆಗೆ ವೈಷ್ಣೋದೇವಿ ಕಟ್ರಾ- ಶ್ರೀನಗರ ನಡುವೆ ಸಾಗುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆಯನ್ನು ತೋರಲಿದ್ದಾರೆ.
ಪ್ಯಾರಿಸ್ನ ಐಫೆಲ್ ಟವರ್ಗಿಂತ 35 ಮೀ. ಹೆಚ್ಚು ಎತ್ತರದ ಸೇತುವೆ.
ಚೆನಾಬ್ ನದಿ ಹರಿಯುವ ಕಣಿವೆ ಮೇಲೆ 359 ಮೀ. (1,178 ಅಡಿ) ಎತ್ತರದಲ್ಲಿ ನಿರ್ಮಾಣವಾಗಿರುವ ಈ ಸೇತುವೆ ಐಫೆಲ್ ಟವರ್ಗಿಂತಲೂ ಎತ್ತರವಾಗಿದೆ. ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿಯನ್ನು 2-3 ಗಂಟೆ ಕಡಿತಗೊಳಿಸಿ 3 ಗಂಟೆಗೆ ಸೀಮಿತಗೊ ಳಿಸಲು ಈ ಸೇತುವೆ ನೆರವಾಗಲಿದೆ.
ನದಿಯಿಂದ ಮೇಲಕ್ಕೆ ಸೇತುವೆಯ ಎತ್ತರ 1,179 ಅಡಿ,ಸೇತುವೆಯ ಒಟ್ಟು ಉದ್ದ 1,315 ಮೀ. ಬಳಕೆಯಾದ ಉಕ್ಕಿನ ಪ್ರಮಾಣ 28,000 ಟನ್,ಬಳಕೆಯಾದ ಕಾಂಕ್ರೀಟ್ 66,000 ಕ್ಯು.ಮೀ.
ನಿರ್ಮಾಣಕ್ಕಾದ ವೆಚ್ಚ 1,486 ಕೋಟಿ ರೂ.