ಬೆಳ್ಳಾರೆ: ಸ್ಕೌಟ್ ಗೈಡ್ ಬೇಸಿಗೆ ಶಿಬಿರ ಕೆಪಿಎಸ್ ಬೆಳ್ಳಾರೆಯ ಪ್ರಾಥಮಿಕ ವಿಭಾಗದಲ್ಲಿ ನಡೆಸಲಾಯಿತು. ಸ್ಕೌಟ್ ಗೈಡ್ ಧ್ವಜಾರೋಹಣದ ಮೂಲಕ ಶಾಲೆಯ ಕಾರ್ಯಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಇವರು ಶಿಬಿರವನ್ನು ಉದ್ಘಾಟಿಸಿದರು. ಸ್ಕೌಟ್ ಗೈಡ್ ಪ್ರಾರ್ಥನೆ ಧ್ವಜ ಗೀತೆಯನ್ನು ಹಾಡಲಾಯಿತು. ಶಾಲೆಯ
ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಸ್ವಾಗತಿಸಿ, ಸ್ಕೌಟ್ ಮಾಸ್ಟರ್ ರಾಜ್ ನಾಯಕ್ ವಂದಿಸಿದರು. ಸ್ಕೌಟ್ ಗೈಡ್ ಶಿಕ್ಷಕಿಯರಾದ ರಾಜೀವಿ ರೈ, ಸಾವಿತ್ರಿ ಕೆ, ಹಾಗೂ ಸುಜಯಶ್ರೀ ಉಪಸ್ಥಿತರಿದ್ದರು. ಮೊದಲನೆಯ ದಿನ ಕುಮಾರಿ ಸುಚಿತ್ರದವರು ವಿದ್ಯಾರ್ಥಿಗಳಿಗೆ ವಿವಿಧ ಕ್ರಾಫ್ಟ್ ತಯಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಎರಡನೆಯ ದಿನದಂದು ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ ಹಾಗೂ ಪ್ರತಿಕ್ಷಾ ಅವರು ಸ್ಕೌಟಿಂಗ್ ಹಾಗೂ ಗೈಡಿಂಗ್ ಬಗ್ಗೆ ಮಾಹಿತಿ ನೀಡಿದರು . ಮೂರನೆಯ ದಿನವನ್ನು ಸರ್ವಧರ್ಮ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಿ ಹೊರ ಸಂಚಾರದೊಂದಿಗೆ ಶಿಬಿರವನ್ನು ಕೊನೆಗೊಳಿಸಲಾಯಿತು.