ಲಖನೌ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮೇಲೆ ಆರು ವಿಕೆಟ್ಗಳ ಜಯ ದಾಖಲಿಸಿತು. ಟಾಸ್ ಗೆದ್ದು ಬ್ಯಾಟ್ ಮಾಡಿದ ಲಖನೌ ತಂಡ ಮಧ್ಯಮ ಹಂತದ ಕುಸಿತದಿಂದ ಚೇತರಿಸಿ
7 ವಿಕೆಟ್ಗೆ 167 ರನ್ ಗಳಿಸಿತು. ಆಯುಷ್ ಬಡೋನಿ (ಔಟಾಗದೇ 55, 35ಎ) ಅವರು ಅರ್ಧ ಶತಕ ಲಖನೌ ಕೈ ಹಿಡಿಯಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಿಂದಲೇ ಬಿರುಸಿನ ಆಟವಾಡಿ 11 ಎಸೆತಗಳು ಬಾಕಿಯಿರುವಂತೆ 4 ವಿಕೆಟ್ಗೆ 170 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆಲ್ರೌಂಡರ್ ಜೇಕ್ ಫ್ರೇಸರ್ ಮೆಕ್ಗುರ್ಕ್ (55) ನಾಯಕ ರಿಷಭ್ ಪಂತ್ (41) ಬೆಂಬಲ 46 ಎಸೆತಗಳಲ್ಲಿ 77 ರನ್ ಸೇರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಇದಕ್ಕೂ ಮೊದಲು
ಕುಲದೀಪ್ 4 ಓವರುಗಳಲ್ಲಿ ಒಂದೂ ಬೌಂಡರಿ ನೀಡದೇ 20 ರನ್ನಿಗೆ 3 ವಿಕೆಟ್ ಉರುಳಿಸಿದರು.