ಬೆಳ್ಳಾರೆ:ಸುಳ್ಯ ತಾಲೂಕಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಮಾತ್ರವಲ್ಲದೆ ಇಡೀ ನಾಡಿಗೆ ಇದು ಅವಿಸ್ಮರಣೀಯ ದಿನ. ಶಾಲಾ ವಸಂತ ಸಂಭ್ರಮದ ಜೊತೆಗೆ ಒಸಾಟ್ ಸಂಸ್ಥೆ ನೀಡಿದ ಅತ್ಯುತ್ತಮ ಶಾಲಾ ಕೊಠಡಿಗಳು ಉದ್ಘಾಟನೆ ಯಾಗಿರುವುದು ಸಂತಸದ ವಿಚಾರ ಎಂದು ಬೆಳ್ಳಾರೆ ಕೆಪಿಎಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಮೂರು ದಿನಗಳ ಕಾಲ ನಡೆಯುವ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಸಂತ ಸಂಭ್ರಮದ

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಇಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ಶಾಲೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಜಬ್ಬ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಸಂತ ಸಂಭ್ರಮ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿದ್ದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್.ಯು
ಕೆ, ಒಸಾಟ್ ಸಂಸ್ಥೆಯ ಅಧ್ಯಕ್ಷ ಬಿ.ವಿ.ಜಗದೀಶ, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ ನಮಿತಾ ಎಲ್ ರೈ, ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ಎನ್.ಎಸ್.ಡಿ. ವಿಠಲದಾಸ್ ಅತಿಥಿಗಳಾಗಿದ್ದರು. ವಸಂತ ಸಂಭ್ರಮ ಸಮಿತಿ ಅಧ್ಯಕ್ಷೆ ರಾಜೀವಿ ಆರ್ ರೈ, ಸಂಚಾಲಕರಾದ ಎಸ್.ಎನ್.ಮನ್ಮಥ, ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ,ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ,ಪ್ರಾಂಶುಪಾಲರಾದ ಜನಾರ್ದನ ಕೆ. ಎನ್.
ಉಪ ಪ್ರಾಂಶುಪಾಲರಾದ ಉಮಾಕುಮಾರಿ, ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ.ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ನಾಯಕ ಧನುಷ್, ಪ್ರಢ ಶಾಲಾ ವಿದ್ಯಾರ್ಥಿ ನಾಯಕ ಅಮೃತ್ ಎಚ್.ಕೆ, ಪಿಯುಸಿ ವಿಭಾಗದ ವಿದ್ಯಾರ್ಥಿ ನಾಯಕ ದೀಕ್ಷಿತ್ ಉಪಸ್ಥಿತರಿದ್ದರು.ವಸಂತ ಸಂಭ್ರಮ ಸಮಿತಿಯ

ಸಂಚಾಲಕರಾದ ಎಸ್.ಎನ್.ಮನ್ಮಥ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಉಮಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಜನಾರ್ದನ ಕೆ. ಎನ್. ವರದಿ ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ ವಂದಿಸಿದರು. ರಾಮಚಂದ್ರ ಭಟ್ ಮುಗುಳಿ, ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು.
ಒಸಾಟ್ ಸಂಸ್ಥೆಯ ಅಮೇರಿಕದ ಅಧ್ಯಕ್ಷ ಬಿ.ವಿ.ಜಗದೀಶ, ಒಸಾಟ್ ಸಂಸ್ಥೆಯ ಭಾರತೀಯ ಅಧ್ಯಕ್ಷ ವಾದಿರಾಜ ಭಟ್, ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ರಾವ್, ಪ್ರಾಜೆಕ್ಟ್ ಮ್ಯಾನೇಜರ್ ಕಿಶೋರ್ ಕುಮಾರ್ ಅವರನ್ನು ಗೌರವಿಸಲಾಯಿತು.
ಆಕರ್ಷಕ ಮೆರವಣಿಗೆ: ಅಭಿವೃದ್ಧಿ ಕಾಮಗಾರಿ ಉದ್ಘಾಟನೆ:

ಪ್ರಾಥಮಿಕ ಶಾಲಾ ವಿಭಾಗದ ‘ಶತಮಾನೋತ್ತರ, ಪ್ರೌಢಶಾಲಾ ವಿಭಾಗದ ‘ಅಮೃತ’ ಪದವಿ ಪೂರ್ವ ಕಾಲೇಜಿನ ‘ಸ್ವರ್ಣ ಸಂಭ್ರಮವನ್ನು ಒಟ್ಟಾಗಿ ವಸಂತ ಸಂಭ್ರಮ ಕಾರ್ಯಕ್ರಮವಾಗಿ 3 ದಿನಗಳ ಕಾಲ ಆಚರಿಸಲಾಗುತಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬೆಳ್ಳಾರೆ ಮೇಲಿನ ಪೇಟೆಯಿಂದ ನಾಸಿಕ್ ಬ್ಯಾಂಡ್ನೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.ಈ ‘ಶೈಕ್ಷಣಿಕ ದಿಬ್ಬಣ’ಕ್ಕೆ
ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕರಾದ ಈರಯ್ಯ ದೂಂತೂರು ಚಾಲನೆ ನೀಡಿದರು. ಬಳಿಕ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷೆ ನಮಿತಾ ಎಲ್. ರೈ ನೆರವೇರಿಸಿದರು. ಬಳಿಕ

ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು. ಪದವಿ ಪೂರ್ವ ವಿಭಾಗದ ನೂತನ 3 ಕೊಠಡಿಗಳು, ಪ್ರಾಥಮಿಕ ಶಾಲೆಗೆ
ಒಸಾಟ್ ಪ್ರಯೋಜಕತ್ವದ 8 ಕೊಠಡಿಗಳು, ನವೀಕೃತ ಕ್ರೀಡಾಂಗಣ, ಪ್ರಾಥಮಿಕ ಶಾಲೆಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹಾಗೂ ದಾನಿಗಳ ನೆರವಿನಿಂದ ಪ್ರಾಥಮಿಕ ಶಾಲೆಗೆ ನಿರ್ಮಿಸಿದ 3 ತರಗತಿ ಕೊಠಡಿಗಳ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು.
