ಸುಳ್ಯ:ಸುಳ್ಯ ಕಸಬಾ ಗ್ರಾಮದ ಬೀರಮಂಗಲ ಬಂಗ್ಲೆಗುಡ್ಡೆಯ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ಗುರುಹಿರಿಯರು ಆರಾಧಿಸಿಕೊಂಡು ಬಂದಿರುವ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಸಾನಿಧ್ಯದಲ್ಲಿ ಮುದ್ದ, ಕಳಲ, ಪೊಸಕಳಲ, ತನ್ನಿಮಾನಿಗ, ಕೊರಗ ತನಿಯ ದೈವಗಳಿದ್ದು ‘ಬಿರ್ಮೆರ್’ ಸಾನಿಧ್ಯವಿದ್ದು, ದೈವಸ್ಥಾನದ ಸಾನಿಧ್ಯ ಜೀರ್ಣೋದ್ಧಾರ ಮತ್ತು
ದೈವಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ಕೆ ಮುಂದಾಗಿದ್ದು ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಸಾನಿಧ್ಯದಲ್ಲಿ ‘ಬಿರ್ಮೆರ್’ ಗುಂಡ, ಮೊಗೇರ್ಕಳ ದೈವಸ್ಥಾನ, ಕೊರಗ ತನಿಯ ಕಟ್ಟೆ, ಗುಳಿಗನ ಕಟ್ಟೆ, ತೀರ್ಥಬಾವಿ, ಆವರಣಗೋಡೆ, ಮಿನಿಹಾಲ್ ಕಛೇರಿ, ಉಗ್ರಾಣ, ಶೌಚಾಲಯ ಇತ್ಯಾದಿಗಳು ನಿರ್ಮಾಣವಾಗಬೇಕಿದ್ದು ಇವುಗಳ ನಿರ್ಮಾಣ ಕಾರ್ಯಕ್ಕೆ ಅಂದಾಜು ರೂಪಾಯಿ ಮೂವತ್ತು ಲಕ್ಷಕ್ಕಿಂತಲೂ ಮಿಕ್ಕಿ ಹಣಕಾಸಿನ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಬಿ.ಬೆಳ್ಯಪ್ಪ ಗೌಡ, ಕೋಶಾಧಿಕಾರಿ ಅಜಿತ್ ಬಿ.ಟಿ, ಕೇಶವ ಬಂಗ್ಲೆಗುಡ್ಡೆ, ದಿನೇಶ್ ಅಡ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯರಾದ ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ನಿತ್ಯಾನಂದ ಮುಂಡೋಡಿ, ಸಂತೋಷ್ ಜಾಕೆ ಮತ್ತಿತರರು ಉಪಸ್ಥಿತರಿದ್ದರು.