ಅರಂತೋಡು: ಅಗ್ನಿ ದುರಂತಕ್ಕೆ ತುತ್ತಾದ ಆರಂತೋಡು ಗ್ರಾಮ ಪಂಚಾಯತ್ನ ಘನ ತ್ಯಾಜ್ಯ ವಿಲೇವಾರಿ ಘಟಕದ ಪುನರ್ ನಿರ್ಮಾಣಕಾಗಿ ಆರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ
ಒಂದು ಲಕ್ಷ ರೂ ಸಹಾಯ ಧನ ನೀಡಲಾಗುವುದು.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಕುತ್ತಮೊಟ್ಟೆಯವರು ಆಡಳಿತ ಸಮಿತಿ ಸದಸ್ಯರಲ್ಲಿ ಚರ್ಚೆ ನಡೆಸಿ ಘಟಕದ ಪುನರ್ ನಿರ್ಮಾಣಕ್ಕೆ 1ಲಕ್ಷ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಘಟಕದ ಪುನರ್ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯ ಹಿನ್ನಲೆಯಲ್ಲಿ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.














