ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಪ್ರಯುಕ್ತ ಕೃಷಿ ವಿಚಾರ ಸಂಕಿರಣ ನಡೆಯಿತು. ಸಂಘದ ಪ್ರಧಾನ ಕಛೇರಿಯ ಶತ ಸೌಧ ದೀನ್ ದಯಾಳ್ ರೈತ ಸಭಾಂಗಣದಲ್ಲಿ ನಡೆದ ಕೃಷಿ ವಿಚಾರಗೋಷ್ಠಿಯಲ್ಲಿ
ಅಡಿಕೆ ಎಲೆಚುಕ್ಕಿ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ಮಿಶ್ರ ಬೆಳೆ ಏನು, ಹೇಗೆ,ಅಡಿಕೆ ಹಳದಿ ರೋಗ ಭಾದಿಸಿದರೆ ಕೃಷಿ ಬದುಕು ಹೇಗೆ ಎಂಬ ವಿಚಾರಗಳ ಬಗ್ಗೆ ವಿಚಾರ ಮಂಡಿಸಲಾಯಿತು.ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಸಿ.ಪಿ.ಸಿ.ಆರ್.ಐ ಸಸ್ಯ ಶಾಸ್ತ್ರ ವಿಭಾದ ಎಚ್.ಒ.ಡಿ ವಿಜ್ಞಾನಿ ಡಾ.ವಿನಯ ಹೆಗ್ಡೆ, ವಿಜ್ಞಾನಿ ಡಾ. ಭವಿಷ್, ಪ್ರಗತಿ ಪರ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ, ಶಂಕರ ಪ್ರಸಾದ್ ರೈ ಸಂಪಾಜೆ ಭಾಗವಹಿಸಿ ಮಾತನಾಡಿದರು.