ಉಬರಡ್ಕ: ಉಬರಡ್ಕ ಗ್ರಾಮ ಪಂಚಾಯತ್ ಕೋಡಿಯಡ್ಕ ಕಾಲನಿ ಸಮೀಪ ಮಣ್ಣು ಕುಸಿತ ಉಂಟಾಗಿದೆ. ಇನ್ನಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದೆ. ಇದರಿಂದ 4-5 ಮನೆಗಳಿಗೆ ಅಪಾಯದ ಸ್ಥಿತಿ ಇದೆ. ಇಲ್ಲಿ ತಡೆಗೋಡೆ
ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಇಲ್ಲಿ ಪಂಚಾಯತ್ ವತಿಯಿಂದ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಇನ್ನಷ್ಟು ಕಡೆ ಪ್ಲಾಸ್ಟಿಕ್ ಹೊದಿಕೆ ಹಾಕಬೇಕಾದ ಅಗತ್ಯತೆ ಇದೆ ಎಂದು ಗ್ರಾ.ಪಂ.ಸದಸ್ಯ ಹರೀಶ್ ರೈ ಉಬರಡ್ಕ ಹೇಳಿದ್ದಾರೆ.