ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯ ಇದರ ವತಿಯಿಂದ 76 ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ಅಭಿವೃದ್ಧಿ ಗೆ ರೂ 25,000 ಅನುದಾನದ ಮಂಜುರಾತಿ ಪತ್ರವನ್ನು ಎಸ್.ಎನ್. ಮನ್ಮಥ ಅವರು ಮತ್ತು ಕ್ಷೇತ್ರದಿಂದ ಶಾಲಾ ವಿದ್ಯಾರ್ಥಿಗಳಿಗೆ ಮಂಜೂರಾದ

8 ಬೆಂಚು ಡೆಸ್ಕ್ನ್ನು ದಿನೇಶ್ ಮಡ್ತಿಲ ಅವರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಮುಖ್ಯೋಪಾಧ್ಯಾಯ ರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ವಿಶಾಲ ಕೆ ,ಬೆಳ್ಳಾರೆ ವಲಯದ ಅಧ್ಯಕ್ಷರಾದ ವೇದಾ ಎಚ್.ಶೆಟ್ಟಿ,ನಿಕಟ ಪೂರ್ವ ಅಧ್ಯಕ್ಷ ಜಿ ಟಿ ವೆಂಕಪ್ಪ ಗೌಡ , ಪಾಲೆಪ್ಪಾಡಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಟ್ಟುತ್ತರ ಎಸ್ ಡಿಎಂ ಸಿ ಅಧ್ಯಕ್ಷ ಹೊನ್ನಪ್ಪ. ಡಿ, ನಿವೃತ ಮುಖ್ಯೋಪಾಧ್ಯಯರು ವೀರಪ್ಪ ಗೌಡ ಗ್ರಾಮದ ಸೇವಾಪ್ರತಿನಿಧಿ ರಶ್ಮಿತಾ ಚರಣ್ ,ಒಕ್ಕೂಟದ ಪದಾಧಿಕಾರಿಗಳು ಸುಂದರಿ ,ಶಿನಪ್ಪ ಚೊಕ್ಕಾಡಿ, ಶಾಲಾ ಅಧ್ಯಾಪಕರು ವೃಂದ ಎಸ್ಡಿಎಂಸಿ ಸದಸ್ಯರು ಶಾಲಾ ವಿದ್ಯಾರ್ಥಿಗಳು ಪೋಷಕರು ಸಂಘದ ಸದಸ್ಯರು ಉಪಸ್ಥಿತರಿದ್ದರು.