ಸುಳ್ಯ:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026ಕ್ಕೆ ಸಂಬಂಧಿಸಿ ರಾಜಕೀಯ ಪಕ್ಷಗಳ ಮುಖಂಡರುಗಳ ಸಭೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 207 ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿರಾಯಕೊಡ ಅಧ್ಯಕ್ಷತೆ ವಹಿಸಿದ್ದರು .
ಸಹಾಯ
ಮತದಾರರ ನೋಂದಣಾಧಿಕಾರಿ ತಹಶೀಲ್ದಾರ್ ಮಂಜುಳ ಎಂ, ಕಡಬ ತಹಶೀಲ್ದಾರ್ ಜಿ ಗಣೇಶ್ ಸವಣೂರ ಉಪಸ್ಥಿತರಿದ್ದರು. ಸಭೆಯಲ್ಲಿ
ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ಸುಬೋದ್ ಶೆಟ್ಟಿ ಮೇನಾಲ ವಿನಯಕುಮಾರ್ ಕಂದಡ್ಕ,ಕಾಂಗ್ರೆಸ್ ಪಕ್ಷದ ಮುಖಂಡರಾದ ಶಶಿಧರ ಎಂ ಜೆ ,ಸತೀಶ್ ನಾಯಕ್ ಮೇಲಿನಮನೆ ಕಡಬ, ಎಎಪಿ ಪಕ್ಷದ ಮುಖಂಡರಾದ ಕಲಂದರ್ ಷಾ, ಉಪಸ್ಥಿತರಿದ್ದರು.
ಸಭೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಗತಿ ಬಗ್ಗೆ ವಿಮರ್ಶಿಸಲಾಯಿತು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಗಣತಿ ನಮೂನೆಗಳ ಡಿಜಿಟಲೈಷೇಶನ್ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು ಶೇಕಡ 81.43 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಲಾಯಿತು .ಮತದಾರರ ಪಟ್ಟಿಯಲ್ಲಿ 1200 ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳ ಪುನರ್ವಿಂಗಡಣೆ ಹಾಗೂ ವಿಭಜನೆ ಬಗ್ಗೆ ಚರ್ಚಿಸಲಾಯಿತು.








